ಈ ದಿನ ವಿಷ್ಣು ದೇವನೊಂದಿಗೆ ಅರಳಿ ಮರವನ್ನೂ ಪೂಜಿಸಲಾಗುತ್ತದೆ. ಮೌನಿ ಅಮಾವಾಸ್ಯೆಯ ದಿನದಂದು ದೇವರು ಮತ್ತು ದೇವತೆಗಳು ಗಂಗಾ ನದಿಯ ದಡದಲ್ಲಿ ಮತ್ತು ಸಂಗಮದಲ್ಲಿ ಸ್ನಾನವನ್ನು ಮಾಡುತ್ತಾರೆ. ಮೌನಿ ಅಮಾವಾಸ್ಯೆಯಂದು ಪ್ರಯಾಗ್ರಾಜ್ನ ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ನಡೆಯುತ್ತದೆ.
ಇದನ್ನು ಅಮೃತ ಸ್ನಾನವೆಂದೂ ಕರೆಯಲಾಗುತ್ತದೆ. ಮೌನಿ ಅಮಾವಾಸ್ಯೆಯ ದಿನ ಗಂಗಾ ಅಥವಾ ಇತರ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವ ವ್ಯಕ್ತಿ ಮೋಕ್ಷವನ್ನು ಪಡೆದುಕೊಳ್ಳುತ್ತಾನೆ. ಪಾಪಗಳು ಪರಿಹಾರವಾಗುತ್ತದೆ. ಕುಟುಂಬದಲ್ಲಿ ಸಂತೋಷ, ಸಮೃದ್ಧಿ ನೆಲೆಯಾಗುತ್ತದೆ.
ಮೌನಿ ಅಮಾವಾಸ್ಯೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ. ಮೌನಿ ಅಮಾವಾಸ್ಯೆಯ ದಿನದಂದು ಅನೇಕ ಶುಭ ಯೋಗಗಳು ರೂಪುಗೊಳ್ಳುತ್ತಿವೆ. ಈ ಶುಭ ಯೋಗಗಳಲ್ಲಿ ಆ ಶಿವ ಭಗವಂತನನ್ನು ಪೂಜಿಸುವುದರಿಂದ ಜೀವನದ ಎಲ್ಲಾ ದುಃಖಗಳು ಮತ್ತು ತೊಂದರೆಗಳಿಂದ ಪರಿಹಾರ ದೊರೆಯುತ್ತದೆ.
ಈ ಶುಭ ಸಂದರ್ಭದಲ್ಲಿ, ಪೂರ್ವಜರಿಗೆ ತರ್ಮಣ ಮತ್ತು ಪಿಂಡದಾನವನ್ನು ಅರ್ಪಿಸುವ ಸಂಪ್ರದಾಯವೂ ಇದೆ. ಈ ಶುಭ ದಿನದಂದು ಗಂಗಾ ನದಿಯಲ್ಲಿ ಸ್ನಾನ ಮಾಡುವುದರಿಂದ ಅನೇಕ ಜನ್ಮಗಳಲ್ಲಿ ಮಾಡಿದ ಪಾಪಗಳು ಕಳೆಯುತ್ತದೆ.
ಇವತ್ತು ಕೋಟಿ ಕೋಟಿ ಭಕ್ತರು ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡುವ ನಿರೀಕ್ಷೆ ಇದೆ. ಈ ಮಧ್ಯೆ ಭಾರೀ ದೊಡ್ಡ ಪ್ರಮಾಣದಲ್ಲಿ ಕಾಲ್ತುಳಿತ ಸಂಭವಿಸಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ.
ಮೌನಿ ಅಮವಾಸ್ಯೆ ಹಿನ್ನೆಲೆಯಲ್ಲಿ ಕೋಟ್ಯಾಂತರ ಭಕ್ತರು ಮಹಾಕುಂಭಕ್ಕೆ ಆಗಮಿಸಿದ್ದಾರೆ. ಅಷ್ಟಕ್ಕೂ ಈ ಮೌನಿ ಅಮವಾಸ್ಯೆ ಅಂದರೆ ಏನು ಅನ್ನೋ ವಿವರ ಇಲ್ಲಿದೆ.
ಮೌನಿ ಅಮವಾಸ್ಯೆಯಂದು ನದಿಯಲ್ಲಿ ಸ್ನಾನ ಮಾಡುವುದು ಅತ್ಯಂತ ಶ್ರೇಷ್ಠಕರ ಎಂದು ವೇದಿಕ ಪಂಚಾಂಗ ಹಾಗೂ ಹಿಂದೂ ಪಂಚಾಂಗಗಳು ಹೇಳುತ್ತವೆ. ಈ ಅಮವಾಸ್ಯೆಯಂದು ನದಿಯಲ್ಲಿ ಸ್ನಾನ ಮಾಡುವುದರಿಂದ ಮಾಡಿರುವ ಪಾಪಗಳೆಲ್ಲಾ ತೊಳೆದು ಹೋಗುತ್ತವೆ ಎಂದು ಹೇಳಲಾಗುತ್ತದೆ. ಇದನ್ನು ಮಾಘಿ ಅಮವಾಸ್ಯೆ ಎಂದು ಕೂಡ ಕರೆಯುತ್ತಾರೆ.
ಸಿದ್ಧಿ ಯೋಗದಂದೇ ಮೌನಿ ಅಮವಾಸ್ಯೆಯನ್ನು ಆಚರಿಸಲಾಗುವುದು. ಈ ದಿನ ಗಂಗೆಯಲ್ಲಿ ಮಿಂದೆದ್ದು ದಾನ ಧರ್ಮಗಳನ್ನು ಮಾಡುವುದರಿಂದ ಬದುಕಿನಲ್ಲಿ ಶುಭ ದಿನಗಳು ಆರಂಭವಾಗುತ್ತವೆ ಎಂದು ಹೇಳಲಾಗುತ್ತದೆ. ಮೌನಿ ಅಮವಾಸ್ಯೆಯಂದು ಪಿತೃಗಳ ಆತ್ಮಶಾಂತಿಗಾಗಿ ಮತ್ತು ಮೋಕ್ಷಕ್ಕಾಗಿ ಶ್ರಾದ್ಧ, ತರ್ಪಣ ಮತ್ತು ಪಿಂಡದಾನವನ್ನು ಕೂಡ ಮಾಡಬಹುದು.
ಈ ರೀತಿ ಮಾಡುವುದರಿಂದ ಪಿತೃದೋಷಗಳು ಪರಿಹಾರವಾಗುತ್ತವೆ ಮತ್ತು ಕುಟುಂಬದ ಸದಸ್ಯರಿಗೆ ಪಿತೃಗಳ ಆಶೀರ್ವಾದ ದೊರೆಯುತ್ತದೆ ಎಂಬ ನಂಬಿಕೆಯೂ ಇದೆ. ಈ ಅಮವಾಸ್ಯೆಯಂದು ಮಾಡುವ ಕೆಲವು ಕಾರ್ಯಗಳು ಫಲದಾಯಕ ಆಗಿರುತ್ತವೆ ಇನ್ನೂ ಕೆಲವು ಆಚರಿಸಲಾರದಂತಹ ಕಾರ್ಯಗಳು ಆಗಿರುತ್ತವೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc