- ಹಾಲಿವುಡ್ನ ಫೇಮಸ್ ಸಿಂಗರ್ ಅಂಡ್ ಸಾಂಗ್ ರೈಟರ್ ಈದ್ ಶೀರನ್ ಪುಷ್ಪರಾಜ್ ಸ್ಟೈಲ್ನ ಕಾಪಿ ಮಾಡಿದ್ದಾರೆ.
- ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ಪುಷ್ಪರಾಜ್ ಹವಾ ಹೆಂಗೈತೆ ಅನ್ನೋದಕ್ಕೆ ಇದಕ್ಕಿಂತ ತಾಜಾ ಉದಾಹರಣೆ ಮತ್ತೊಂದು ಬೇಕಿಲ್ಲ ಅನ್ಸುತ್ತೆ. ಯಸ್, ಹಾಲಿವುಡ್ನ ಫೇಮಸ್ ಸಿಂಗರ್ ಅಂಡ್ ಸಾಂಗ್ ರೈಟರ್ ಈದ್ ಶೀರನ್ ಪುಷ್ಪರಾಜ್ ಸ್ಟೈಲ್ನ ಕಾಪಿ ಮಾಡಿದ್ದಾರೆ. ಪುಷ್ಪ ಸ್ಟೈಲ್ನಲ್ಲಿ ತಗ್ಗೆದೆಲೆ ಎನ್ನುವ ಮೂಲಕ ಶೀರನ್ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ದಿ ಗ್ರೇಟ್ ಇಂಡಿಯನ್ ಕಪಿಲ್ ಶೋನಲ್ಲಿ ಭಾಗಿಯಾದ ವೇಳೆ ಶೀರನ್ ಪುಷ್ಪರಾಜ್ನ ಅನುಕರಣೆ ಮಾಡಿದ್ದು ಸದ್ಯ ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಇದನ್ನ ನೋಡಿ ಸ್ಟೈಲಿಷ್ ಸ್ಟಾರ್ ಅಲ್ಲು ಫ್ಯಾನ್ಸ್ ಕಾಲರ್ ಪಟ್ಟಿ ಎಗರಿಸ್ತಿದ್ದಾರೆ. ಮಾತ್ರವಲ್ಲ ತಗ್ಗೆದೆಲೆ ಅಂತ ಫ್ಯಾನ್ಸ್ ಕೂಡ ಡೈಲಾಗ್ ಬಿಡ್ತಿದ್ದಾರೆ.
ಈದ್ ಶೀರನ್ ಇಂಡಿಯಾಗೆ ಆಗಾಗ ಭೇಟಿ ಕೊಡುತ್ತಲೇ ಇರ್ತಾರೆ. ಇಂಡಿಯನ್ ಸಿನಿಮಾಗಳ ಮೇಲೆ ವಿಶೇಷ ಒಲವು ಇಟ್ಕೊಂಡಿರೋ ಅವರು, ಇಂಡಿಯನ್ ಪೀಪಲ್ಸ್ ಪ್ಲಸ್ ಸೆಲಬ್ರಿಟಿ ಜೊತೆ ಕನೆಕ್ಟೆಡ್ ಇರ್ತಾರೆ. ಇತ್ತೀಚೆಗೆ ಕಿಂಗ್ ಖಾನ್ ಶಾರುಖ್ ಖಾನ್ ಹಾಗೂ ಗೌರಿಖಾನ್ರನ್ನ ಭೇಟಿ ಮಾಡಿದ್ದರು. ಇದೀಗ, ಪುಷ್ಪ ಚಿತ್ರದ ಐಕಾನಿಕ್ ಡೈಲಾಗ್ ಮೂಲಕ ಸೌತ್ ಆಡಿಯನ್ಸ್ಗೆ ಕನೆಕ್ಟ್ ಆಗಿದ್ದಾರೆ. ಶೇಫ್ ಆಫ್ ಯೂ ಸಾಂಗ್ ಮೂಲಕ ಗ್ಲೋಬಲ್ ಆಡಿಯನ್ಸ್ನ ಹುಚ್ಚೆಬ್ಬಿಸಿರೋ ಈದ್ ಶೀರನ್, ಈಗ ಪುಷ್ಪ ಡೈಲಾಗ್ ಹೊಡೆದು ಹಲ್ ಚಲ್ ಎಬ್ಬಿಸಿದ್ದಾರೆ.
ಇನ್ನೂ ಪುಷ್ಪ ಪಾರ್ಟ್-2 ಈ ಭಾರಿ ಪ್ಯಾನ್ ಇಂಡಿಯಾ ಮಾತ್ರವಲ್ಲ ಪ್ಯಾನ್ ವರ್ಲ್ಡ್ ಪ್ರೇಕ್ಷಕರನ್ನು ಕೂಡ ಕಣ್ಣರಳಿಸುವಂತೆ ಮಾಡಿದೆ. ಈದ್ ಶೀರನ್ ಅವ್ರು ಪುಷ್ಪರಾಜ್ ಅವ್ರ ಐಕಾನಿಕ್ ಸ್ಟೆಪ್ನ ಎನ್ಯಾಕ್ಟ್ ಮಾಡಿ ತೋರಿಸಿರೋದು ನೋಡಿದರೆ ಹಾಲಿವುಡ್ ಲೋಕ ಕೂಡ ಪುಷ್ಪ ದಿ ರೂಲ್ ನೋಡೋದಕ್ಕೆ ಕಾತುರದಿಂದ ಕಾಯ್ತಿದೆ ಅನ್ನೋದು ಗೊತ್ತಾಗುತ್ತೆ. ಇದೇ ಆಗಸ್ಟ್ 15ರಂದು ಪುಷ್ಪ ದಿ ರೂಲ್ ವರ್ಲ್ಡ್ವೈಡ್ ಅದ್ಧೂರಿಯಾಗಿ ರಿಲೀಸ್ ಆಗ್ತಿದೆ. ಪುಷ್ಪ 1 ಗಿಂತ ಪುಷ್ಪ 2 ಬಿಗ್ಗರ್ ಅಂಡ್ ಬೆಟರ್ ಆಗಿರಲಿದೆ ಅಂತ ಇಡೀ ಫಿಲ್ಮ್ ಟೀಮ್ ಹೇಳಿಕೊಂಡಿದೆ. ಈಗಾಗಲೇ ರಿಲೀಸ್ ಆಗಿರುವ ಪುಷ್ಪ ಟೀಸರ್ ಹಾಗೂ ಪುಷ್ಪ ಪುಷ್ಪ ಲಿರಿಕಲ್ ಸಾಂಗ್ ಕಿಕ್ಕೇರಿಸಿದೆ. ಯೂಟ್ಯೂಬ್ ಲೋಕದಿಂದ ದಿಬ್ಬಣ ಹೊರಟು ಆಲ್ ಓವರ್ ಇಂಡಿಯಾ ಟ್ರೆಂಡ್ ಆಗಿದೆ. ಇದೀಗ ಸೀಕ್ವೆಲ್ ಮೇಲಿನ ನಿರೀಕ್ಷೆ ಮತ್ತಷ್ಟು ದುಪ್ಪಟ್ಟಾಗಿದ್ದು, ಆಗಸ್ಟ್ 15 ಗಾಗಿ ವಿಶ್ವಸಿನಿದುನಿಯಾ ಪ್ರೇಕ್ಷಕರು ಕುತೂಹಲದಿಂದ ಕಾಯುವಂತಾಗಿದೆ. ಸುಕುಮಾರ್ ನಿರ್ದೇಶನದ, ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಡಾಲಿ ಧನಂಜಯ್ ಸೇರಿದಂತೆ ಅತೀ ದೊಡ್ಡ ತಾರಾಬಳಗ ಒಳಗೊಂಡಿದೆ.