ಲೈಫ್ ಇನ್ಷೂರೆನ್ಸ್ ಮತ್ತು ಹೆಲ್ತ್ ಇನ್ಷೂರೆನ್ಸ್ ಪ್ಲಾನ್ಗಳ ಪ್ರೀಮಿಯಮ್ ಹಣಕ್ಕೆ ವಿಧಿಸಲಾಗುತ್ತಿರುವ ಜಿಎಸ್ಟಿ ತೆರಿಗೆ ದರ ಪರಿಷ್ಕರಿಸಲು ಸರ್ಕಾರ ಮುಂದಾಗಿದೆ. ಜಿಎಸ್ಟಿ ಮಂಡಳಿ ಸೆಪ್ಟೆಂಬರ್ 15ರಂದು 13 ರಾಜ್ಯಗಳ ಗ್ರೂಪ್ ಆಫ್ ಮಿನಿಸ್ಟರ್ಸ್ ಒಳಗೊಂಡ ಸಮಿತಿಯೊಂದನ್ನು ರಚಿಸಿದೆ. ಅಕ್ಟೋಬರ್ 30ರೊಳಗೆ ಈ ಜಿಒಎಂ ತನ್ನ ವರದಿಯನ್ನು ಸಲ್ಲಿಸಲಿದೆ. ಇದರ ಶಿಫಾರಸುಗಳ ಆಧಾರದ ಮೇಲೆ ನವೆಂಬರ್ನಲ್ಲಿ ಜಿಎಸ್ಟಿ ಮಂಡಳಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ.
ಆರೋಗ್ಯ ವಿಮೆ ಮತ್ತು ಜೀವ ವಿಮೆಗಳ ಪ್ರೀಮಿಯಮ್ ಹಣದ ಮೇಲೆ ಶೇ. 18ರಷ್ಟಿರುವ ಜಿಎಸ್ಟಿ ದರವನ್ನು ತೆಗೆದುಹಾಕಬೇಕು ಅಥವಾ ಕಡಿಮೆ ಮಾಡಬೇಕು ಎನ್ನುವ ಒತ್ತಾಯ ಎಲ್ಲೆಡೆ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ದರ ಪರಿಷ್ಕರಣೆಗಾಗಿ ಸಮಿತಿಯೊಂದನ್ನು ರಚಿಸಲಾಗಿದೆ. ನಿನ್ನೆ ಭಾನುವಾರ ಜಿಎಸ್ಟಿ ಕೌನ್ಸಿಲ್ 13 ಸಚಿವರ ಸಮಿತಿಯೊಂದನ್ನು ರಚಿಸಿದೆ. ಈ ಸಮಿತಿಯು ಸರಕು ಮತ್ತು ಸೇವಾ ತೆರಿಗೆ ಮಂಡಳಿಗೆ ತನ್ನ ವರದಿಯನ್ನು ಅಕ್ಟೋಬರ್ 30ರೊಳಗೆ ಸಲ್ಲಿಸುವ ನಿರೀಕ್ಷೆ ಇದೆ.
ಸೆಪ್ಟೆಂಬರ್ 9ರಂದು ನಡೆದ 65ನೇ ಜಿಎಸ್ಟಿ ಮಂಡಳಿ ಸಭೆಯಲ್ಲಿ ಇನ್ಷೂರೆನ್ಸ್ ಪ್ರೀಮಿಯಮ್ ಮೇಲಿನ ಜಿಎಸ್ಟಿ ದರವನ್ನು ಪರಿಶೀಲಿಸಿ ಪರಿಷ್ಕರಣೆ ನಡೆಸಲು ಗ್ರೂಪ್ ಆಫ್ ಮಿನಿಸ್ಟರ್ಸ್ ಅನ್ನು ಸ್ಥಾಪಿಸಲು ನಿರ್ಧರಿಸಲಾಗಿತ್ತು. ಅಕ್ಟೋಬರ್ 30ಕ್ಕೆ ಈ ಸಚಿವರ ಸಮಿತಿ ತನ್ನ ಶಿಫಾರಸುಗಳನ್ನು ಸಲ್ಲಿಸುವ ನಿರೀಕ್ಷೆ ಇದೆ. ಈ ಜಿಒಎಂ ವರದಿಯಲ್ಲಿನ ಅಂಶಗಳ ಆಧಾರದ ಮೇಲೆ ಜಿಎಸ್ಟಿ ಮಂಡಳಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ. ನವೆಂಬರ್ನಲ್ಲಿ ಜಿಎಸ್ಟಿ ಮಂಡಳಿಯ 55ನೇ ಸಭೆ ನಡೆಯಲಿದೆ.