ಹುಬ್ಬಳ್ಳಿ: ಮೃತ ನೇಹಾ ಹಿರೇಮಠ ಮನೆಗೆ ಇಂದು ಭೇಟಿ ನೀಡಿದ ಗೃಹ ಸಚಿವ ಜಿ. ಪರಮೇಶ್ವರ ಅವರು ಪಕ್ಷದ ಎಲ್ಲ ಮುಖಂಡರನ್ನು ಮತ್ತು ಅಧಿಕಾರಿಗಳನ್ನು ಹೊರಗಿಟ್ಟು ಗೌಪ್ಯವಾಗಿ ಮಾತುಕತೆ ನಡೆಸಿದ್ದಾರೆ.
ನೇಹಾ ಹತ್ಯೆ ಬೆನ್ನಲ್ಲೇ ಹುಬ್ಬಳ್ಳಿಯ ಅಂಜಲಿ ಎಂಬ ಯುವತಿಯ ಹತ್ಯೆಯಾಗಿತ್ತು. ಅದರಲ್ಲೂ ನೇಹಾ ತಂದೆ ನಿರಂಜನ ಹಿರೇಮಠ ಕಾರ್ಪೊರೇಟರ್ ಆಗಿರುವ ವಾರ್ಡ್ ನಲ್ಲಿಯೇ ಕೊಲೆಯಾಗಿದ್ದರಿಂದ ನಿರಂಜನ ಹಿರೇಮಠ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಹೀಗಾಗಿ ಗೃಹ ಸಚಿವ ಜಿ. ಪರಮೇಶ್ವರ ಶಾಸಕ ಎನ್.ಹೆಚ್.ಕೋನರೆಡ್ಡಿ, ನೇಹಾ ತಂದೆ ನಿರಂಜನ, ತಾಯಿ ಗೀತಾ ಇಬ್ಬರ ಜೊತೆ ರಹಸ್ಯ ಮಾತುಕತೆ ನಡೆಸಿದ್ದು, ಜಿಲ್ಲೆಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.