ಹುಬ್ಬಳ್ಳಿ: ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಮುಂಬರುವ ಶಬರಿಮಲೆ ಋತುವಿನಲ್ಲಿ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು, ದಕ್ಷಿಣ ರೈಲ್ವೆ ಕೊಚುವೇಲಿ ಮತ್ತು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು (ಎಸ್ಎಂವಿಟಿ) ನಿಲ್ದಾಣಗಳ ನಡುವೆ ವಿಶೇಷ ರೈಲುಗಳ ಸೇವೆಯನ್ನು ಪ್ರತಿ ದಿಕ್ಕಿನಲ್ಲಿ ಹನ್ನೆರಡು ಟ್ರಿಪ್ಗಳನ್ನು ಓಡಿಸಲು ನಿರ್ಧರಿಸಲಾಗಿದೆ. ಅವುಗಳ ವಿವರ ಕೆಳಗಿಂನಂತಿದೆ.
ರೈಲು ಸಂಖ್ಯೆ 06083 ಕೊಚುವೇಲಿ – ಎಸ್ ಎಂ ವಿ ಟಿ ಬೆಂಗಳೂರು ಸಾಪ್ತಾಹಿಕ ಎಕ್ಸ್ ಪ್ರೆಸ್ ವಿಶೇಷ ರೈಲು ಕೊಚುವೇಲಿ ನಿಲ್ದಾಣದಿಂದ ನವೆಂಬರ್ 12 ರಿಂದ ಜನವರಿ 28, 2025 ವರಗೆ 18:05 ಗಂಟೆಗೆ ಹೊರಟು, ಮರುದಿನ ದಿನ 10:55 ಗಂಟೆಗೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ.
ರೈಲು ಸಂಖ್ಯೆ 06084 ಎಸ್ ಎಂ ವಿ ಟಿ ಬೆಂಗಳೂರು – ಕೊಚುವೇಲಿ ಸಾಪ್ತಾಹಿಕ ಎಕ್ಸ್ ಪ್ರೆಸ್ ವಿಶೇಷ ರೈಲು ಎಸ್ಎಂವಿಟಿ ಬೆಂಗಳೂರು ನಿಲ್ದಾಣದಿಂದ ನವೆಂಬರ್ 13 ರಿಂದ ಜನವರಿ 29, 2025 ವರಗೆ 12:45 ಗಂಟೆಗೆ ಹೊರಟು, ಮರುದಿನ ದಿನ 06:45 ಗಂಟೆಗೆ ಕೊಚುವೇಲಿ ತಲುಪಲಿದೆ.
ಇದನ್ನು ಓದಿ: ದೆಹಲಿ, ಹರಿಯಾಣದಲ್ಲಿ ಗಾಳಿಯ ಗುಣಮಟ್ಟ ಮತ್ತೆ ಕಳಪೆ!
ಈ ರೈಲು ಎರಡು ದಿಕ್ಕಿನ ಮಾರ್ಗದಲ್ಲಿ ಕೊಲ್ಲಮ್, ಕಾಯಂಕುಳಂ, ಪಾಲಕಾಡ್, ಪೊದನೂರ್, ಈರೋಡ್, ಸೇಲಂ, ಜೋಲಾರ್ ಪೆಟ್ಟಾಯ್ ಜಂಕ್ಷನ್ ಗಳ ನಡುವೆ ಸಂಚರಿಸಲಿದೆ. ಪ್ರಯಾಣಿಕರು ಅಧಿಕೃತ ವೆಬ್ಸೈಟ್ (www.enquiry.indianrail.gov.in) ಗೆ ಭೇಟಿ ನೀಡಿ, NTES ಅಪ್ಲಿಕೇಶನ್ ಬಳಸಿ ಅಥವಾ 139 ಗೆ ಡಯಲ್ ಮಾಡುವ ಮೂಲಕ ಈ ರೈಲುಗಳ ಸಮಯವನ್ನು ಪರಿಶೀಲಿಸಬಹುದು ಎಂದು ನೈರುತ್ಯ ರೈಲ್ವೆ ಮಾಹಿತಿ ನೀಡಿದೆ.ಭಾರತೀಯ ರೈಲ್ವೆ ಕಳೆದ 24 ಗಂಟೆಗಳಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಜನಸಂಖ್ಯೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣಿಕರನ್ನು ಸಾಗಿಸೋ ಮೂಲಕ ದಾಖಲೆ ನಿರ್ಮಿಸಿದೆ.
ಇದನ್ನು ಓದಿ: ದೀಪಾವಳಿ ಪಾರ್ಟಿಯಲ್ಲಿ ಎಣ್ಣೆ, ಮಾಂಸ: ಬ್ರಿಟಿಷ್ ಹಿಂದೂಗಳು ಶಾಕ್!
ಅ.1 ರಿಂದ ನ. 5 ರವರೆಗೆ ಭಾರತೀಯ ರೈಲ್ವೆ ವಿಶೇಷ ರೈಲುಗಳ ಮೂಲಕ 65 ಲಕ್ಷ ಪ್ರಯಾಣಿಕರಿಗೆ ಸೇವೆ ಕಲ್ಪಿಸಿದೆ. ಇದೇ ಅವಧಿಯಲ್ಲಿ 7.5 ಲಕ್ಷ ಪ್ರಯಾಣಿಕರು ವಿಶೇಷ ರೈಲುಗಳ ಮೂಲಕ ಬಿಹಾರ, ಪೂರ್ವ ಉತ್ತರ ಪ್ರದೇಶ ಮತ್ತು ಜಾರ್ಖಂಡ್ಗೆ ಪ್ರಯಾಣಿಸಿದ್ದಾರೆ.