ನೋಡ, ನೋಡುತ್ತಿದ್ದಂತೆ ನಡು ರೋಡಿನಲ್ಲಿ ರಾಯಲ್ ಎನ್ಫೀಲ್ಡ್ ಬೈಕ್ ಹೊತ್ತಿ ಉರಿದು ಬ್ಲಾಸ್ಟ್ ಆಗಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಈ ಸಮಯದಲ್ಲಿ ಬೈಕ್ಗೆ ಬಿದ್ದ ಬೆಂಕಿ ಆರಿಸಲು ಹೋದ ಸ್ಥಳೀಯರು ಕೂಡಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಬೈಕ್ಗೆ ಬೆಂಕಿ ಬಿದ್ದು ಹೊತ್ತಿ ಉರಿಯುತ್ತಿರುವ ವಿಡಿಯೋವನ್ನು ಸ್ಥಳೀಯರು ಸೆರೆ ಹಿಡಿದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಈ ಘಟನೆಯು ಮೊಘಲ್ಪುರದ ಬಿಬಿ ಬಜಾರ್ ರೋಡ್ನಲ್ಲಿ ನಡೆದಿದ್ದು ಪಕ್ಕದಲ್ಲಿದ್ದ ಬೈಕ್ಗಳಿಗೂ ಸಹ ಬೆಂಕಿ ಆವರಿಸಿ ಅನಾಹುತ ಸಂಭವಿಸಿದೆ. ಘಟನೆಯಲ್ಲಿ ಪೊಲೀಸ್ ಕಾನ್ಸ್ಸ್ಟೇಬಲ್ ಸೇರಿ 10 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನ ಚಿಕಿತ್ಸೆಗಾಗಿ ಪ್ರಿನ್ಸೆಸ್ ಎಸ್ರಾ ಆಸ್ಪತ್ರೆಗೆ ದಾಖಲಿಸಲಾಗಿದೆ.