5 ಪಂದ್ಯಗಳ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಭಾರತ ಗೆದ್ದಿತ್ತು. ಆದ್ರೆ ಎರಡನೆ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಆಸೀಸ್ ಪಾರುಪತ್ಯ ಸಾಧಿಸಿತ್ತು. ಇದರಿಂದ ಸರಣಿಯಲ್ಲಿ 1-1 ರಿಂದ ಎರಡು ತಂಡಗಳು ಸಮಬಲ ಸಾಧಿಸಿವೆ..
ಈಗ ಎಲ್ಲರ ಕಣ್ಣು 3ನೇ ಟೆಸ್ಟ್ ಪಂದ್ಯದತ್ತ ನೆಟ್ಟಿದೆ.. ಭಾರತ ತಂಡಕ್ಕೆ ಈ ಗೆಲುವು ಬೇಕೇಬೇಕು. ಕಾರಣ ಮುಂಬರುವ ವಿಶ್ವ ಟೆಸ್ಟ ಚಾಂಪಿಯನ್ಶಿಪ್ಗೆ ಆಯ್ಕೆಯಾಗಬೇಕಾದ್ರೆ ಟೀಮ್ ಇಂಡಿಯಾ ಇನ್ನುಳಿದ ಎಲ್ಲಾ ಪಂದ್ಯಗಳನ್ನ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.
ಹೀಗಾಗಿ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ 3ನೇ ಪಂದ್ಯ ಡಿ.16 ರಂದು ನಡೆಯಲಿದ್ದು, ಗಾಬಾ ಮೈದಾನದಲ್ಲಿ ಎರಡು ತಂಡಗಳು ಗೆಲುವಿಗಾಗಿ ಸೆಣಸಾಡಲಿವೆ. ಹಾಗದ್ರೆ ಗಾಬಾ ಪಿಚ್ ಹೇಗಿದೆ..? ಗಾಬಾ ಗಾಬಾ ಪಿಚ್ ಬೌಲರ್ಗಳಿಗೆ ಸಹಕಾರಿಯಾಗುತ್ತಾ..? ಅಥವಾ ಬ್ಯಾಟರ್ಗಳಿಗೆ ಸಹಕರಿಸುತ್ತಾ..? ಅನ್ನೋ ಕುತೂಹಲ ಎಲ್ಲರಿಗೂ ಇದೆ.
ಗಾಬಾ ಪಿಚ್ ಸಪೋರ್ಟ್ ಯಾರಿಗೆ..?
ಗಾಬಾ ಪಿಚ್ ವೇಗದ ಬೌಲರ್ಗಳಿಗೆ ಸ್ವರ್ಗ ಎಂದೇ ಕರೆಯಲ್ಪಡುತ್ತದೆ. ಗಾಬಾ ಪಿಚ್ ವೇಗ ಮತ್ತು ಬೌನ್ಸ್ಗೆ ಹೆಸರುವಾಸಿ. 5 ದಿನಗಳಲ್ಲಿ ಮೊದಲ ಒಂದರಿಂದ ಒಂದೂವರೆ ಗಂಟೆಗಳ ಕಾಲ ಬ್ಯಾಟರ್ಗಳು ಅನಗತ್ಯವಾಗಿ ಬ್ಯಾಟ್ ಬೀಸದೆ ತಾಳ್ಮೆಯಿಂದ ಆಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ. ಈ ಹಿನ್ನಲೆಯಲ್ಲಿ, 3ನೇ ಟೆಸ್ಟ್ ಪಂದ್ಯಕ್ಕೆ ಗಾಬಾ ಪಿಚ್ ಅನ್ನು ಹೇಗೆ ಸಿದ್ಧಪಡಿಸಲಾಗಿದೆ ಎಂಬುದರ ಬಗ್ಗೆ ಪಿಚ್ ಕ್ಯೂರೇಟರ್ ಹೇಳಿಕೆ ನೀಡಿದ್ದು, ‘ಗಾಬಾ ಪಿಚ್ ವೇಗ ಮತ್ತು ಬೌನ್ಸ್ಗೆ ಹೆಸರುವಾಸಿ. ಈ ಬಾರಿಯೂ ಅದೇ ರೀತಿ ಸಿದ್ಧಪಡಿಸಲಾಗಿದೆ’ ಎಂದಿದ್ದಾರೆ...
ಒಟ್ಟಾರೆ, ಭಾರತ ತಂಡಕ್ಕೆ ಈ ಪಂದ್ಯ ಮಹತ್ವದ್ದಾಗಿದ್ದು, ಬೌನ್ಸಿ ಪಿಚ್ನಲ್ಲಿ ಆಸೀಸ್ ವೇಗದ ಬೌಲರ್ಗಳನ್ನ ಟೀಮ್ ಇಂಡಿಯಾ ಬ್ಯಾಟರ್ಗಳು ಹೇಗೆ ಎದುರಿಸುತ್ತಾರೆ ಎಂದು ಕಾದುನೋಡಬೇಕಿದೆ.