ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾರ್ಯ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಲವೆಡೆ ನಾಳೆ ನಾಡಿದ್ದು ಅಂದರೆ ಡಿಸೆಂಬರ್ 21, 22ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಶನಿವಾರ ನಾಳೆ ಬೆಳಗ್ಗೆ 10:00 ರಿಂದ ಸಂಜೆ 05:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.ಹೀಗಾಗಿ ಈ ಏರಿಯಾಗಳಲ್ಲಿನ ಜನರು ತಮ್ಮ ದಿನನಿತ್ಯದ ಕಾರ್ಯಗಳನ್ನು ಬೆಳಗ್ಗೆ 10 ಗಂಟೆಯೊಳಗೆ ಮುಗಿಸಿಕೊಳ್ಳಬೇಕಿ. ಹಾಗಾದ್ರೆ, ಯಾವೆಲ್ಲಾ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎನ್ನುವ ವಿವರ ಈ ಕೆಳಗಿನಂತಿದೆ ನೋಡಿ.
ನಾಳೆ(ಡಿ.21) ಈ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ
“ಮೈಸೂರು ರಸ್ತೆ ಆರ್.ವಿ ಇಂಜಿನಿಯರಿಂಗ್ ಕಾಲೇಜು ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಬಿ.ಡಿ.ಎ ಇಂದ್ರಪ್ರಸ್ತ, ಮಡಾ ಗ್ರೀನ್, ಎಮ್.ಬಿ.ಆರ್ ಶಾಂಗ್ರೀಲಾ, ಬಿ.ಡಿ.ಎ ವಲಗೇರಹಳ್ಳಿಯ ಎಲ್ಲಾ ಬ್ಲಾಕ್ ಗಳು, ಕೆಂಗೇರಿ, ಹರ್ಷ ಲೇಔಟ್, ಹೇಬಿಟೆಟ್ ಅಪಾರ್ಟ್ ಮಂಟ್, ಐರಾವತ ಹೋಟೆಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಕೆಂಗೇರಿ ಮೇಗಳ ಬೀದಿ ಪ್ರದೇಶ, ಅನಗಾಡಿ ಬಿಡು ಪ್ರದೇಶ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಇರೋದಿಲ್ಲ.
(ಡಿಸೆಂಬರ್ 22) ರಂದು ಯಾವೆಲ್ಲಾ ಕಡೆ ಕರೆಂಟ್ ಇರಲ್ಲ
ಡಿಸೆಂಬರ್.22ರ ನಾಡಿದ್ದು, ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ 220/66/11ಕೆವಿ ಎಸ್.ಆರ್.ಎಸ್ ಪೀಣ್ಯ ಉಪಕೇಂದ್ರದಲ್ಲಿನ ಈ ಕೆಳಕಂಡ ಪ್ರದೇಶಗಳಲ್ಲಿ ಬೆಳಗ್ಗೆ 10:00 ರಿಂದ ಸಂಜೆ 03:30 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
“ಪೀಣ್ಯ 10 ನೇ ಮುಖ್ಯ ರಸ್ತೆ, 11ನೇ ಮುಖ್ಯ ರಸ್ತೆ, ಉಡುಪಿ ಹೋಟೆಲ್ ಸುತ್ತಮುತ್ತ, ಆರ್ ಪಾಲಿಟೆಕ್ನಿಕ್ ರಸ್ತೆ, ಲಕ್ಷ್ಮಿ ದೇವಿ ನಗರ, ಲಗ್ಗೆರೆ ಹಳ ಗ್ರಾಮ, ಲವಕುಶನಗರ ರಾಜೀವ್ ಗಾಂಧಿ ನಗರ, ಚೌಡೇಶ್ವರಿ ನಗರ 6ನೇ, 7ನೇ, 8ನೇ, 9ನೇ ಕ್ರಾಸ್, 1ನೇ ಹಂತ ಪಿಐಎ 7ನೇ ಕ್ರಾಸ್, 1ನೇ ಹಂತ ಪಿಯುಎ, ಟಿಸಿಎಸ್ ಕ್ರಾಸ್ ರಸ್ತೆ ಬಳಿ, ಇಸ್ರೋ 1ನೇ, 2ನೇ ಕ್ರಾಸ್, 1ನೇ ಹಂತದ ಪಿಐಎ ಏರಿಯಾ ಮತ್ತು ಯಶ್ವತ್ಥಪುರ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಇರೋದಿಲ್ಲ.
ಡೈಲಿ ಶೇರ್ – ಆಟೋಜೋನ್ ನೆಲಗೇದರನಹಳ್ಳಿ ಉಪಕೇಂದ್ರ: ಡಿ.22 (ಭಾನುವಾರ) ಮನೋರಂಜನೆ ರಂದು ಬೆಳಗ್ಗೆ 10:00 ರಿಂದ ಸಂಜೆ 05.30 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಅಪರಾಧ ಪ್ರಯಾಣ ನೆಲಗೇದರನಹಳ್ಳಿ, ಹೆಚ್ ಎಂಟಿ ಲೇಔಟ್, ಶಿವಪುರ ಟಿ ಲೇಔಟ್, ಗೃಹಲಕ್ಷ್ಮಿ ಲೇಔಟ್, ಶಿವಪುರ ಬೆಳ್ಳಾರ್ ಲೇಔಟ್, ವಿನಾಯಕನಗರ, 8ನೇ ಮೈಲ್ ರಸ್ತೆ, ಜಾಲಹಳ್ಳಿ ಕ್ರಾಸ್, ಶೋಭಾ ಅಪಾರ್ಟ್ ಮೇಂಟ್, ಅಮರಾವತಿ ಲೇಔಟ್, ಕರ್ನಾಟಕ ಆಂಟಿಬಯೋಟಿಕ್ಸ್ ಪ್ರೈವೆಟ್ ಲಿಮಿಟೆಡ್, ಕೆಮ್ಮಪ್ಪಯ್ಯ ಗಾರ್ಡನ್ ನಗರ, ಕೆಮ್ಮಪ್ಪಯ್ಯ ಟೈಪ್ ತಿಗಳರಪಾಳ್ಯ ಮುಖ್ಯ ರಸ್ತೆ, ಪರ್ಲ್ ರಸ್ತೆ, ಮಾರುತಿ ಕೈಗಾರಿಕಾ ಎಸ್ಟೇಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪವರ್ ಕಟ್ ಆಗಲಿದೆ.