ಕೇರಳದ ವಾಯನಾಡ್ನಲ್ಲಿ ಭೂ ಕಸಿತ ಸಂಭವಿಸಿದ್ದು ಜನರ ಜೀವನದ ಜೊತೆ ಚೆಲ್ಲಾಟವಾಡಿದೆ. ರಕ್ಷಣಾ ಕಾರ್ಯಕ್ಕೆ ಸೇನೆ ಸಹ ಕೈ ಜೋಡಿಸಿದೆ. ಇದೇ ವೇಳೆ ಭಾರತೀಯ ಸೇನಾ ತಂಡ ಕೇವಲ 31 ಗಂಟೆಗಳಲ್ಲಿ ನಿರ್ಮಿಸಿದ ಬ್ರಿಡ್ಜ್ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸೈನಿಕರು ನಿರ್ಮಿಸಿದ ಬ್ರಿಡ್ಜ್ ಭೂಕುಸಿತದಿಂದ ಭಾರೀ ಅನಾಹುತಕ್ಕೆ ಈಡಾದ ಚೂರಲ್ಮಲಾ ಮತ್ತು ಮುಂಡಕ್ಕೈ ಪ್ರದೇಶಗಳಿಗೆ ಜೀವ ಸೇತುವೆ ಆಗಿದೆ. ಈ ಸೇತುವೆಯನ್ನು ಸೈನಿಕರ ತಂಡ ಕೇಲವ 31 ಗಂಟೆಗಳಲ್ಲಿ ನಿರ್ಮಿಸಿ ಸಾಧನೆ ಗೈದಿದೆ. 190 ಫೀಟ್ ಉದ್ದದ ಬೈಲಿ ಬ್ರಿಡ್ಜ್ ಈಗ ಎಲ್ಲರ ಗಮನ ಸೆಳೆದಿದೆ.
ಬ್ರಿಡ್ಜ್ ನಿರ್ಮಿಸಿದ್ದು ಹೇಗೆ?
ಮಂಗಳವಾರ ವಯನಾಡಿನಲ್ಲಿ ಭೂ ಕುಸಿತವಾಗುತ್ತಿದ್ದಂತೆ ಅಲರ್ಟ್ ಆದ ಸೇನಾ ತಂಡ, ಎರಡು ಗ್ರಾಮಗಳ ಜೋಡಣೆಗೆ ಒಂದು ಸೇತುವೆ ನಿರ್ಮಿಸುವ ಬ್ಲ್ಯೂ ಪ್ರಿಂಟ್ ಅದಾಗಲೇ ನಿರ್ಮಿಸಿ ಆಗಿತ್ತು. ಅದಕ್ಕಾಗಿ ಬೆಂಗಳೂರಿನಿಂದ 10 ಅಡಿ ಉದ್ದದ ಪ್ಯಾನಲ್ಗಳನ್ನು 20 ಟ್ರಕ್ಗಳಲ್ಲಿ ಬೆಂಗಳೂರಿನಿಂದ ಚೂರಲ್ಮಲಾಗೆ ಸಾಗಿಸಲಾಯಿತು. ಈ ಬ್ರಿಡ್ಜ್ ನಿರ್ಮಿಸಲು ಒಟ್ಟಾರೆಯಾಗಿ 19 ಸ್ಟೀಲ್ ಪ್ಯಾನಲ್ಗಳ ಸಹಾಯದಿಂದ 190 ಅಡಿ ಬ್ರಿಡ್ಜ್ ನಿರ್ಮಿಸಲಾಯಿತು. ಈ ಬ್ರಿಡ್ಜ್ ನಿರ್ಮಾಣ ಕಾರ್ಯಕ್ಕೆ ಮಂದ್ರಾಸ್ನಿಂದ ನುರಿತ ಇಂಜಿನಿಯರ್ಗಳ ತಂಡ ಸೇನೆಯೊಂದಿಗೆ ಕೈ ಜೋಡಿಸಿತು.
ಇಂಜಿನಿಯರ್ಗಳು ಜುಲೈ 31 ಬೆಳಗ್ಗೆ 9 ಗಂಟೆಗೆ ಸ್ಥಳಕ್ಕೆ ಬಂದಿಳಿಯಿತು. 140 ಅಧಿಕಾರಿಗಳ ತಂಡದಿಂದ ಬ್ರಿಡ್ಜ್ ನಿರ್ಮಾಣ ಕಾರ್ಯ ಆರಂಭವಾಯಿತು. ಈ ಸೇತುವೆ ಮೇಲೆ ಒಂದು ಟ್ರಕ್ ಓಡಾಡುವಷ್ಟು ಸ್ಥಳವನ್ನು ನಿರ್ಮಿಸಲಾಯಿತು. ಈ ಬ್ರಿಡ್ಜ್ ಸುಮಾರು 24 ಟನ್ಗಳ ಭಾರವನ್ನು ಸಹಿಬಲ್ಲದಾಗಿದೆ. ಸೈನಿಕರ ತಂಡದ ಶ್ರಮದಿಂದ ಆಗಸ್ಟ್ 1, ಸಂಜೆ 6 ಗಂಟೆಗೆ ಈ ಬ್ರಿಡ್ಜ್ ನಿರ್ಮಾಣ ಕಾರ್ಯ ಪೂರ್ಣ ಗೊಂಡಿತು. ಎಲ್ಲೆಡೆ ಹರ್ಷೋದ್ಘಾರ.. ಮೊದಲು ಸೇನಾ ವಾಹನ ಚಲಾಯಿಸಿತು. ನಂತರ ಆಂಬ್ಯುಲೆನ್ಸ್ ಹೋಗಲು ಅನುವು ಮಾಡಿಕೊಡಲಾಯಿತು. ಸೈನಿಕರ ಈ ಮಹತ್ತರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.