- ಭಾರತೀಯ ಸೇನೆಯ ನೂತನ ಮುಖ್ಯಸ್ಥರಾಗಿ ಉಪೇಂದ್ರ ದ್ವಿವೇದಿ ನೇಮಕ
- ಭಾರತೀಯ ಸೇನೆ ಮುಖ್ಯಸ್ಥರಾಗಿದ್ದ ನಿವೃತ್ತಿ ಹೊಂದಿದ್ದ ಮನೋಜ್ ಪಾಂಡೆ
ಭಾರತೀಯ ಸೇನೆಯ ಮುಖ್ಯಸ್ಥರಾಗಿದ್ದ ಜನರಲ್ ಮನೋಜ್ ಪಾಂಡೆ ಅವರು ನಿವೃತ್ತರಾದ ಬೆನ್ನಲ್ಲೇ ಸೇನೆಯ ನೂತನ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರು ಇಂದು ಅಧಿಕಾರ ವಹಿಸಿಕೊಂಡರು.
ಚೀನಾ ಮತ್ತು ಪಾಕಿಸ್ತಾನ ದ ಗಡಿಗಳಲ್ಲಿ ಅಪಾರ ಕಾರ್ಯಾಚರಣೆಯ ಅನುಭವ ಹೊಂದಿರುವ ಜನರಲ್ ದ್ವಿವೇದಿ ಅವರು ಸೇನೆಯ ಉಪಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಫೆಬ್ರವರಿ 19 ರಂದು ಸೇನಾ ಸಿಬ್ಬಂದಿಯ ಉಪಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು, ಲೆಫ್ಟಿನೆಂಟ್ ಜನರಲ್ ದ್ವಿವೇದಿ ಅವರು 2022- 2024ರವರೆಗೆ ಉತ್ತರ ಕಮಾಂಡ್ನ ಜನರಲ್ ಆಫೀಸರ್ ಕಮಾಂಡಿಂಗ್- ಇನ್- ಚೀಫ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಲೆಫ್ಟಿನೆಂಟ್ ಜನರಲ್ ದ್ವಿವೇದಿ ಅವರು 18 ನೇ ಜಮ್ಮು ಮತ್ತು ಕಾಶ್ಮೀರ ರೈಫಲ್ಸ್ ರೆಜಿಮೆಂಟ್ ಮತ್ತು 26 ನೇ ವಲಯದ ಅಸ್ಸಾಂ ರೈಫಲ್ಸ್ ಬ್ರಿಗ್ರೇಡ್ ಮುಖ್ಯಸ್ಥ, ಅಸ್ಸಾಂ ರೈಫಲ್ಸ್ ಮತ್ತು 9 ನೇ ಕಾರ್ಪ್ಸ್ನ ಇನ್ಸ್ ಪೆಕ್ಟರ್ ಜನರಲ್, ಉತ್ತರ ಕಮಾಂಡ್ನಲ್ಲಿ ಜನರಲ್ ಆಫೀಸರ್ ಕಮಾಂಡಿಂಗ್ – ಇನ್-ಚೀಫ್ ಆಗಿ ಕಾರ್ಯನಿರ್ವಹಿಸಿದ್ದಾರೆ.
ಜನರಲ್ ಮನೋಜ್ ಪಾಂಡೆ ಅವರು ಇಂದು ನಿವೃತ್ತರಾಗಲಿದ್ದು, ಸೇವಾ ಹಿರಿತನ ಆಧರಿಸಿ ದ್ವಿವೇದಿ ಅವರನ್ನು ಸೇನಾ ಮುಖ್ಯಸ್ಥರನ್ನಾಗಿ ಜೂನ್ 11 ರಂದು ರಕ್ಷಣಾ ಸಚಿವಾಲಯ ನೇಮಕಗೊಳಿಸಿತ್ತು.