ಜೀವನದಲ್ಲಿ ಒಂದೇ ಒಂದು ಬಾರಿ ಮದುವೆಯಾಗುವುದು ಹಾಗಾಗಿ ಅದ್ಧೂರಿಯಾಗಿ ಮದುವೆಯಾಗಬೇಕು ಎಂಬುದು ಕೆಲವರ ಆಸೆ ಆಗಿರುತ್ತದೆ. ಹಾಗೆಯೇ ಮದುವೆಗಾಗಿ ಅನೇಕರು ಇನ್ನಿಲ್ಲದ ವೈಭವವನ್ನು ಮದುವೆಯಲ್ಲಿ ತೋರಿಸುತ್ತಾರೆ. ಕಷ್ಟಪಟ್ಟು ಕೂಡಿಟ್ಟ ಹಣದಿಂದನೋ, ಸಾಲ ಸೋಲ ಮಾಡಿಯಾದರೂ ಅದ್ಧೂರಿಯಾಗಿ ಮದ್ವೆಯಾಗುತ್ತಾರೆ. ಇತ್ತೀಚಿನ ಮದುಮೆಗಳಲ್ಲಂತೂ ಅರ್ಥಪೂರ್ಣವಾಗುವುದಕ್ಕಿಂತ ಹೆಚ್ಚು ಅದ್ಧೂರಿತನವೇ ಇಂದಿನ ಮದ್ವೆಗಳಲ್ಲಿ ಹೆಚ್ಚಾಗುತ್ತಿದೆ.
ಮಗ ಅಥವಾ ಮಗಳ ಮದ್ವೆಯನ್ನು ಅದ್ಧೂರಿಯಾಗಿ ಮಾಡಿಕೊಡಬೇಕು ಎಂದು ತಂದೆ, ತಾಯಿಯ ಆಸೆ ಕೂಡ ಆಗಿರುತ್ತದೆ. ಅದೇ ರೀತಿ ಇಲ್ಲೊಂದು ಕಡೆ ಮಗನ ಮದ್ವೆಯನ್ನು ವಿಜೃಂಭಣೆಯಿಂದ ನಡೆಸಬೇಕು. ಎಲ್ಲೂ ಇಲ್ಲದ ಅದ್ಧೂರಿತನ ನಮ್ಮ ಮನೆಯ ಮದ್ವೆಯಲ್ಲಿರಬೇಕು ಎಂದು ಅಪ್ಪನೋರ್ವ ತನ್ನ ಮಗನ ಮದ್ವೆ ದಿಬ್ಬಣದಲ್ಲಿ ಕುಣಿಯುವುದಕ್ಕಾಗಿಯೇ 20 ರಷ್ಯನ್ ಹುಡುಗಿಯರನ್ನು ಕರೆಸಿದ್ದಾರೆ. ಇದರಿಂದ ಮದುವೆ ರಂಗು ಕೂಡ ಇನ್ನೊಂದು ಹಂತಕ್ಕೆ ತಂದಿದೆ. ಮದ್ವೆ ದಿಬ್ಬಣದ ವೇಳೆ ಕುಣಿಯುವುದಕ್ಕಾಗಿಯೇ ರಷ್ಯನ್ ಬೆಡಗಿಯರನ್ನು ಕರೆಸಿರುವುದರಿಂದ ಈ ಮದ್ವೆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿವೆ.
ಅಂಬಾನಿ ಮನೆ ಮದ್ವೆಯ ವೈಭವವನ್ನು ನೋಡಿರಬಹುದು. 5 ಸಾವಿರ ಕೋಟಿ ವೆಚ್ಚದ ಈ ಮದ್ವೆಯಲ್ಲಿ ಇಲ್ಲದ ಮನೋರಂಜನೆಯೇ ಇರಲಿಲ್ಲ. ವಿದೇಶಿ ನೃತ್ಯಗಾರರಿಂದ ಹಿಡಿದು ಹಾಲಿವುಡ್ ನಟ, ನಟಿಯರು, ಬಾಲಿವುಡ್ ತಾರೆಯರು, ವಿವಿಧ ಕ್ಷೇತ್ರದ ಗಣ್ಯರು ಇದರಲ್ಲಿ ಭಾಗವಹಿಸಿದ್ದರು. ಜೊತೆಗೆ ಸೆಲೆಬ್ರಿಟಿಗಳು ಈ ಮದ್ವೆಯಲ್ಲಿ ನೃತ್ಯ ಪ್ರದರ್ಶನ ನೀಡಿದ್ದರು. ಆದರೆ ಸಾಮಾನ್ಯರೊಬ್ಬರು ಇಷ್ಟೊಂದು ಅದ್ದೂರಿತನವಿಲ್ಲದಿದ್ದರೂ ತಾನು ಯಾರಿಗೆ ಕಡಿಮೆ ಇಲ್ಲ ಎಂದು ಮಗನ ಮದುವೆಯಲ್ಲಿ ಕುಣಿಯಲು ರಷ್ಯನ್ ಬೆಡಗಿಯರನ್ನು ಕರೆಸಿದ್ದು ಈಗ ಟಾಕ್ ಆಫ್ ದಿ ಟೌನ್ ಆಗಿದೆ.
ವೈರಲ್ ಆದ ವೀಡಿಯೋದಲ್ಲಿ ಹೊಳೆಯುವ ಚಿನ್ನದ ಬಣ್ಣದ ತುಂಡುಡುಗೆ ಬಟ್ಟೆ ತೊಟ್ಟು ಕುಣಿದಿದ್ದಾರೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಜನ ಒಬ್ಬೊಬ್ಬರು ಒಂದೊಂದು ರೀತಿಯಾಗಿ ಕಾಮೆಮಟ್ ಮಾಡ್ತಿದ್ದಾರೆ. ಆದರೆ ಈ ವೀಡಿಯೋದ ನಿಖರತೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. up__say ಎಂಬ ಇನ್ಸ್ಟಾಗ್ರಾಮ್ ಪೇಜ್ನಿಂದ ಈ ವೀಡಿಯೋ ವೈರಲ್ ಆಗಿದೆ. ಅನೇಕರು ಈ ವೀಡಿಯೋಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ವೈಭವತನ ಬೇಕಿತ್ತಾ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಕನಿಷ್ಠ ಅವರ ತಂದೆಗೆ ಗೊತ್ತಿದೆ ಮಗನಿಗೆ ಏನಿಷ್ಟ ಎಂದು’ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಂದು ವೇಳೆ ಡಿವೋರ್ಸ್ ಆದ್ರೆ ಇವರು 10 ಲಕ್ಷ ತಿಂಗಳಿಗೆ ಪರಿಹಾರ ನೀಡಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.