ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಟಿಮೋರ್-ಲೆಸ್ಟೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಗ್ರ್ಯಾಂಡ್-ಕಾಲರ್ ಆಫ್ ದಿ ಆರ್ಡರ್ ಆಫ್ ಟಿಮೋರ್-ಲೆಸ್ಟೆಯನ್ನು ಅಧ್ಯಕ್ಷ ಜೋಸ್ ರಾಮೋಸ್-ಹೊರ್ಟಾ ಅವರು ಪ್ರದಾನ ಮಾಡಿದರು. ಸಾರ್ವಜನಿಕ ಸೇವೆ ಮತ್ತು ಶಿಕ್ಷಣ, ಸಮಾಜ ಕಲ್ಯಾಣ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಅವರ ಸಮರ್ಪಣೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಈ ಗೌರವವು ಭಾರತ ಮತ್ತು ಟಿಮೋರ್-ಲೆಸ್ಟೆ ನಡುವಿನ ಸ್ನೇಹ ಸಂಬಂಧದ ಪ್ರತಿಬಿಂಬವಾಗಿದೆ ಎಂದು ರಾಷ್ಟ್ರಪತಿ ಮುರ್ಮು ಹೇಳಿದ್ದಾರೆ.