ಇಂಡೋನೇಷ್ಯಾದ ರುವಾಂಗ್ ಪರ್ವತದಲ್ಲಿ ಜ್ವಾಲಮುಖಿ ಸ್ಫೋಟಗೊಂಡಿದೆ. ಹೊಗೆ ಶಾಖದ ಪರಿಣಾಮ ಬಹು ದೂರದವರೆಗೆ ಜ್ವಾಲಾಮುಖಿ ಹಿನ್ನೆಲೆಯಲ್ಲಿ ಸಾವಿರಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರಿಸಲಾಗಿದೆ.
ಇಂಡೋನೇಷ್ಯಾದ ಉತ್ತರ ಸುಲಾವೆಸಿಯ ದ್ವೀಪದಲ್ಲಿ ಬುಧವಾರ ಜ್ವಾಲಾಮುಖಿ ಸ್ಫೋಟಿಸಿದೆ. ಲಾವಾ ಹಾಗೂ ಬಿಸಿ ಬೂದಿ ಆಕಾಶದೆತ್ತರಕ್ಕೆ ವ್ಯಾಪಿಸಿದೆ. ಸ್ಫೋಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ರಾಜಧಾನಿ ಮನಾಡೋದ ಸುಮಾರು 100 ಕಿ. ಮೀ ದೂರದ ಪರ್ವತದಲ್ಲಿ ಜ್ವಾಲಾಮುಖಿ ಸ್ಫೋಟಿಸಿದೆ. ಈ ಜ್ವಾಲಾಮುಖಿ ಒಂದೇ ದಿನದಲ್ಲಿ ಐದು ಬಾರಿ ಚಿಮ್ಮಿದೆ. ಪರ್ವತಕ್ಕೆ ಸಮುದ್ರ ಹೊಂದಿಕೊಂಡಿರುವ ಕಾರಣ ಸುನಾಮಿ ಸಂಭವಿಸುವ ಸಾಧ್ಯತೆ ಇದೆ ಎಂದು ಇಲ್ಲಿನ ಆಡಳಿತ ಎಚ್ಚರಿಕೆ ನೀಡಿದೆ.
ಸಮುದ್ರ ಉತ್ತರ ಬದಿಯಲ್ಲಿ ತಗುಲಂಡಂಗ್ ದ್ವೀಪದಲ್ಲಿರುವ 12,000 ಜನರನ್ನು ಪರ್ವತದಿಂದ 6 ಕಿ.ಮೀ ದೂರದವರೆಗೆ ಸ್ಥಳಾಂತರ ಮಾಡುವಂತೆ ತಿಳಿಸಲಾಗಿದೆ.