ಐಪಿಎಲ್ 2024 ರ ಸೀಸನ್ 17 ರ ಫೈನಲ್ ಪಂದ್ಯದಲ್ಲಿ ಎಸ್ಆರ್ಹೆಚ್ ತಂಡವನ್ನು ಮಣಿಸಿ ಕೆಕೆಆರ್ ತಂಡ ಟ್ರೋಫಿ ಗೆದ್ದಿದೆ. ಈ ಮೂಲಕ ಕೆಕೆಆರ್ ತಂಡವು 3 ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಚೆನ್ನೈನಲ್ಲಿ ನಡೆದ ಪೈನಲ್ ಪಂದ್ಯದಲ್ಲಿ ಎಸ್ಆರ್ಹೆಚ್ ವಿರುದ್ಧ ಕೆಕೆಆರ್ ತಂಡ 8 ವಿಕೆಟ್ಗಳ ಗೆಲುವು ಪಡೆದಿತ್ತು. ಆದರೆ ಫೈನಲ್ ಪಂದ್ಯದಲ್ಲಿ ಬಹುಭಾಷ ನಟ ಸೋನು ಸೂದ್ ಅವರು ಕ್ಯಾಮೆರಾಮ್ಯಾನ್ ಆಗಿ ಕೆಲಸ ಮಾಡಿದ್ರಾ ಎನ್ನುವ ಪ್ರಶ್ನೆ ಮೂಡಿದೆ.
ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಎಸ್ಆರ್ಹೆಚ್ ವಿರುದ್ಧ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ಗೆದ್ದು ಬೀಗಿತ್ತು. 2012, 2014 ಹಾಗೂ 2024 ರಲ್ಲಿ ಕೆಕೆಆರ್ ತಂಡ ಚಾಂಪಿಯನ್ ಪಟ್ಟಕ್ಕೇರಿದೆ. ನಟನೆ ಜೊತೆಗೆ ವಿವಿಧ ಸಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸೋನು ಸೂದ್ ಅವರು ಐಪಿಎಲ್ ಮ್ಯಾಚ್ನಲಲಿ ಕ್ಯಾಮೆರಾಮ್ಯಾನ್ ಆಗಿ ಕಾಣಿಸಿಕೊಂಡಿರುವುದು ವಿಶೇಷ. ಪಂದ್ಯ ನಡೆಯುತ್ತಿರುವಾಗ ನಟ ಸೋನು ಸೂದ್ ಅವರು ಕ್ಯಾಮೆರಾಮ್ಯಾನ್ ಆಗಿ ಕಾಣಿಸಿಕೊಂಡಿರುವುದು ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿದೆ.
ಪಂದ್ಯವನ್ನು ಸೆರೆ ಹಿಡಿಯುವ ಕ್ಯಾಮೆರಾಮ್ಯಾನ್ ಬಳಿ ಹೋಗಿ, ಈ ವೇಳೆ ತಮಾಷೆಗೆಂದು ಕ್ಯಾಮೆರಾಮ್ಯಾನ್ ಬಳಿ ಇದ್ದ ಕ್ಯಾಮೆರಾವನ್ನು ಇಸ್ಕೊಂಡು ವಿಡಿಯೋ ಮಾಡಿದ್ದಾರೆ. ಅಲ್ಲದೇ ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ವಿಡಿಯೋ ಶೇರ್ ಮಾಡಿ, ಐಪಿಎಲ್ ಕ್ಯಾಮೆರಾಮ್ಯಾನ್ ಬೇಕಿದ್ರೆ ಹೇಳಿ ನಾನು ರೆಡಿಯಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.