ಐಪಿಎಲ್ 2024 ರ ಫೈನಲ್ ಪಂದ್ಯ ಇಂದು ನಡೆಯಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ರೈಸರ್ಸ್ ಹೈದಾರಾಬಾದ್ ತಂಡಗಳು ಸೆಣಸಾಟ ನಡೆಸಲಿವೆ. ಇಂದು ಈ ಪಂದ್ಯದೊಂದಿಗೆ ಐಪಿಎಲ್ ಸೀಸನ್ 17 ಗೆ ತೆರೆ ಎಳೆಯಲಾಗುತ್ತೆ.
ಕೆಕೆಆರ್ ತಂಡ ಐವರೆಗೆ 2 ಬಾರಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತ್ತು. ಮತ್ತೆ ಮೂರನೇ ಸಲ ಕಪ್ ಗೆಲ್ಲುವ ವಿಶ್ವಾಸದಲ್ಲಿದೆ. ಎಸ್ಆರ್ಹೆಚ್ ತಂಡವು ಕೂಡ ಈಗಾಗಲೇ 2 ಸಲ ಟ್ರೋಫಿಯನ್ನು ಗೆದ್ದು ಬೀಗಿತ್ತು. ಇಧಿಗ ಮೂರನೇ ಬಾರಿಯೂ ಟ್ರೋಫಿ ಗೆಲ್ಲುವ ಭರವಸೆ ಹೊಂದಿದೆ.
ಉಭಯ ತಂಡಗಳು ಈವರೆಗೆ 27 ಬಾರಿ ಮುಖಾಮುಖಿಯಾಗಿವೆ. ಆದರೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು 18 ಬಾರಿ ಜಯ ಸಾಧಿಸಿದ್ದು. ಸನ್ರೈಸರ್ಸ್ ಹೈದಾರಾಬಾದ್ ತಂಡ 9 ಬಾರಿ ಮಾತ್ರ ಗೆದ್ದಿತ್ತು. ಎಸ್ಆರ್ಹೆಚ್ ವಿರುದ್ಧ ಕೆಕೆಆರ್ ಮೇಲುಗೈ ಹೊಂದಿರುವುದು ಸ್ಪಷ್ಟ. ಇನ್ನು ಅಂತಿಮ ಪಂದ್ಯದಲ್ಲಿ ಎರಡು ತಂಡಗಳ ಭರ್ಜರಿ ಪೈಪೋಟಿಯನನು ಕಾಣಬಹುದು.