ಆರ್ಸಿಬಿ ವರ್ಸಸ್ ಸಿಎಸ್ಕೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಮ್ಯಾಚ್ಗೆ ಎರಡೂ ತಂಡದ ಫ್ಯಾನ್ಸ್ ಸಿಕ್ಕಪಟ್ಟೆ ಕಾದುಕೊಂಡು ಕುಳಿತ್ತಿದ್ದಾರೆ. ಧೋನಿ ಅವರ ಲಾಸ್ಟ್ ಐಪಿಎಲ್ ಆದ್ದರಿಂದ ಚೆನ್ನೈ ಸೂಪರ್ ಕಿಂಗ್ಸ್ ಗೆಲ್ಲಬೇಕು ಅಂತ ಚೆನ್ನೈನ ಅಭಿಮಾನಿಗಳು, ಒಂದು ಸಲವೂ ಕಪ್ ಗೆದ್ದಿಲ್ಲ ಹೊಸ ಅಧ್ಯಾಯದಲ್ಲಾದರೂ ಕಪ್ ಗೆಲ್ಲಲಿ ಅಂತ ಆರ್ಸಿಬಿ ಅಭಿಮಾನಿಗಳು ಬೇಡಿಕೊಳ್ತಿದ್ದಾರೆ.
ಭಾನುವಾರ ಸ್ಟೇಡಿಮ್ನಲ್ಲಂತೂ ಕೆಂಪು ಹಾಗೂ ಹಳದಿ ಬಣ್ಣ ರಾರಾಜಿಸಲಿದೆ. ಐಪಿಎಲ್ನ ಆರ್ಸಿಬಿ ವರ್ಸಸ್ ಸಿಎಸ್ಕೆ ಮ್ಯಾಚ್ ಜಿದ್ದಾಜಿದ್ದಿಯಿಂದ ಕೂಡಿರುತ್ತೆ. ಅದರಲ್ಲೂ ಈ ಪಂದ್ಯ ಎರಡೂ ತಂಡಗಳಿಗೆ ಮಾಡು ಇಲ್ಲವೇ ಮಡಿ. ಈ ಪಂದ್ಯದಲ್ಲಿ ಗೆದ್ದ ತಂಡ ಪ್ಲೇ ಆಫ್ಗೆ ಹೋಗಲಿದೆ.
ಆದರೆ ಆರ್ಸಿಬಿ ಅಭಿಮಾನಿಗಳೆ ಒಂದು ಹೊಸ ಭಯ ಶುರುವಾಗಿದೆ. ಅದು ಮಳೆರಾಯ. ಬೆಂಗಳೂರಿನಲ್ಲಿ ಈಗಾಗಲೇ ಮಳೆ ಶುರುವಾಗಿದ್ದು. ಹವಮಾನ ಇಲಾಖೆ ಆರೆಂಜ್ ಅಲರ್ಟ್ ಕೂಡ ಘೋಷಣೆ ಮಾಡಿದೆ. ಪಂದ್ಯದ ವೇಳೆ ಮಳೆ ಬಂದು ಪಂದ್ಯ ಸ್ಥಗಿತಗೊಂಡರೆ ಆರ್ಸಿಬಿಯ ಪ್ಲೇ ಆಫ್ ಕನಸು ನುಚ್ಚು ನೂರು ಆಗಲಿದೆ. ಹೀಗಾಗಿ ಅಭಿಮಾನಿಗಳು ವರುಣದೇವನನ್ನ ಬೇಡಿಕೊಳ್ಳೋದಕ್ಕೆ ಶುರುಮಾಡಿಕೊಂಡಿದ್ದಾರೆ.
ಹಾಗಂತಾ ಆರ್ಸಿಬಿ ಅಭಿಮಾನಿಗಳು ತುಂಬಾ ಟೆನ್ಷನ್ ಮಾಡಿಕೊಳ್ಳುವ ಅವಶ್ಯಕತೆ ಕೂಡ ಇಲ್ಲ. ಯಾಕೆಂದ್ರೆ ಬೆಂಗಳೂರಿನಲ್ಲಿ ಮ್ಯಾಚ್ ವೇಳೆ ಮಳೆ ಬಂದರೂ ಕೂಡ ತುಂಬಾ ಹೊತ್ತು ಪಂದ್ಯ ಸ್ಥಗಿತ ಆಗುವುದಿಲ್ಲ. ಮಳೆ ಬಂದ ನಂತರ ನೀರು ಆದಷ್ಟು ಬೇಗ ಗ್ರೌಂಡ್ನಿಂದ ಹೊರಹೋಗುವಂತಹ ಅತ್ಯುತ್ತಮ ಡ್ರೈನೇಜ್ ವ್ಯವಸ್ಥೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿದೆ. ಹೀಗಾಗಿ ಮಳೆ ಬಂದು ನಿಂತರೂ ಪಂದ್ಯ ಆದಷ್ಟು ಬೇಗ ಮತ್ತೆ ಶುರುವಾಗಲಿದೆ.