ಐಪಿಎಲ್ 2024ರ 53ನೇ ಪಂದ್ಯದಲ್ಲಿ ಮಹೇಂದ್ರ್ ಸಿಂಗ್ ಧೋನಿ ಆ ಒಂದು ಕ್ಯಾಚ್ ಹಿಡಿದು ಹೊಸ ದಾಖಲೆ ಸೃಷ್ಟಿಸಿದ್ದಾರೆ. ಮೊನ್ನೆ ನಡೆದ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಈ ಮೈಲಿಗಲ್ಲು ದಾಟಿದ್ದಾರೆ.
ಪಂಜಾಬ್ ತಂಡದ ಬ್ಯಾಟರ್ರಾದ ಜಿತೇಶ್ ಶರ್ಮಾ ಕ್ಯಾಚ್ ಹಿಡಿದು ಈ ದಾಖಲೆ ಮಾಡಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ 150 ಕ್ಯಾಚ್ಗಳನ್ನು ಹಿಡಿದ ಮೊದಲ ವಿಕೆಟ್ ಎಂಬ ರೆಕಾರ್ಡ್ ಇವರ ಪಾಲಾಗಿದೆ. ಒಟ್ಟು 254 ಇನಿಂಗ್ಸ್ಗಳಲ್ಲಿ ಧೋನಿ ಇಲ್ಲಿಯವರೆಗೆ 150 ಕ್ಯಾಚ್ಗಳನ್ನು ಹಿಡಿದಿದ್ದಾರೆ. ಇದರೊಂದಿಗೆ 42 ಸ್ಟಂಪಿಗ್ ಮಾಡುವಲ್ಲಿ ಸಕ್ಸಸ್ ಆಗಿದ್ದಾರೆ. ಈ ಮೂಲಕ 192 ವಿಕೆಟ್ ಕಿತ್ತ ಐಪಿಎಲ್ನ ವಿಶೇಷ ಯಶಸ್ವಿ ಕೀಪರ್ ಎನ್ನಿಸಿಕೊಂಡಿದ್ದಾರೆ.
ಇದೇ ಸಾಲಿನಲ್ಲಿ ದಿನೇಶ್ ಕಾರ್ತಿಕ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಆರ್ಸಿಬಿ ಪರ ಆಟವಾಡುತ್ತಿರುವ ದಿನೇಶ್ ಈವರೆಗೆ 141 ಕ್ಯಾಚ್ಗಳನ್ನು ಹಿಡಿದಿದ್ದಾರೆ. ಹಾಗೆಯೇ 231 ಇನಿಂಗ್ಸ್ಗಳಲ್ಲಿ 177 ಬಲಿ ಪಡೆಯುವ ಮೂಲಕ ಐಪಿಎಲ್ನ 2ನೇ ಯಶಸ್ವಿ ಕೀಪರ್ ಎನಿಸಿಕೊಂಡಿದ್ದಾರೆ. ಈ ಒಂದು ಹೊಸ ದಾಖಲೆಯೊಂದಿಗೆ ಧೋನಿ ಈ ಬಾರಿ ಐಪಿಎಲ್ನೊಂದಿಗೆ ವಿದಾಯ ಹೇಳ್ತರಾ ಕಾದು ನೋಡಬೇಕಿದೆ.