ಆರ್ಸಿಬಿಯ ಪ್ಲೇ ಆಫ್ ಕನಸು ತಿರುಕನ ಕನಸಾಯ್ತು ಅಂದುಕೊಳ್ಳುವಾಗಲೇ ಆರ್ಸಿಬಿ ಮತ್ತೆ ಗೆಲುವಿನ ಲಯಕ್ಕೆ ಬಂದಿದೆ. ಸತತ ಸೋಲಿನ ಬಳಿಕ ಮತ್ತೆ ಗೆಲುವಿನ ರುಚಿ ಕಂಡುಕೊಂಡ ಆರ್ಸಿಬಿಯ ಪ್ಲೇ ಆಫ್ ಕನಸು ಇನ್ನೂ ಜೀವಂತವಾಗಿ ಉಳಿದಿದೆ.
ಸದ್ಯ 12 ರಲ್ಲಿ 5 ಪಂದ್ಯಗಳನ್ನ ಗೆದ್ದು 10 ಅಂಕಗಳೊಂದಿಗೆ 7 ಸ್ಥಾನದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವಿದೆ. ಪ್ಲೇ ಆಫ್ ಕ್ವಾಲಿಫೈ ಆಗಲು ನಾಲ್ಕು ತಂಡಗಳ ನಡುವೆ ತೀವ್ರ ಪೈಪೋಟಿ ಇದೆ. ಚೆನ್ನೈ ಸೂಪರ್ ಕಿಂಗ್ಸ್ , ಡೆಲ್ಲಿ ಕ್ಯಾಪಿಟಲ್ಸ್ , ಲಕ್ನೌ ಸೂಪರ್ ಜೈಂಟ್ಸ್ ಮೂರು ತಂಡಗಳು 12 ಪಂದ್ಯಗಳಲ್ಲಿ 6 ಪಂದ್ಯಗಳನ್ನ ಗೆದ್ದುಕೊಂಡಿದೆ.
ಆರ್ಸಿಬಿ ಇನ್ನುಳಿದ ಎರಡೂ ಪಂದ್ಯಗಳನ್ನ ಗೆದ್ದರೂ ಕೂಡ 14 ಅಂಕ ಆಗಲಿದೆ. ಆದರೆ ಆರ್ಸಿಬಿ ನೆಟ್ ರನ್ ರೇಟ್ ಚೆನ್ನಾಗಿದ್ದು, ಪ್ಲೇ ಆಫ್ ಹೋಗುವ ಅವಕಾಶಗಳು ಇದೆ. ಆದರೇ ಇಂದಿನ ಚೆನ್ನೈ ಹಾಗೂ ರಾಜಸ್ತಾನ ಪಂದ್ಯದಲ್ಲಿ ಚೆನೈ ಸೋಲಬೇಕು. ಆರ್ಸಿಬಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲ್ಲಬೇಕು. ಜೊತೆಗೆ ಮುಂದಿನ ಚೆನೈ ಸೂಪರ್ ಕಿಂಗ್ಸ್ ವಿರುದ್ಧವೂ ಗೆಲ್ಲಬೇಕು.
ಕೇವಲ ಆರ್ಸಿಬಿ ಗೆಲ್ಲೋದಷ್ಟೇ ಅಲ್ಲ. ಲಕ್ನೌ ಸೂಪರ್ ಜೈಂಟ್ಸ್ ಗೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಪಂದ್ಯ ಇದ್ದು. ಆ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಲಕ್ನೌ ಸೋಲಬೇಕು. ಆಗ ಆರ್ಸಿಬಿ ಪ್ಲೇ ಆಫ್ ಮತಲುಪೋದಕ್ಕೆ ಅವಕಾಶ ಇದೆ.