ನಿನ್ನೆ ನಡೆದ 2ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕೆಕೆಆರ್ ತಂಡ ಭಾರೀ ಅಂತರದಿಂದ ಗೆದ್ದು ಬೀಗಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ ಸುನಿಲ್ ನರೈನ್ (81) ಅವರ ಹಾಪ್ ಸೆಂಚುರಿ ನೆರವಿನಿಂದ 235 ರನ್ ಗರಿಷ್ಟ ಮೊತ್ತವನ್ನು ಕಲೆಹಾಕಿತ್ತು. ಈ ಟಾರ್ಗೆಟ್ ಅನ್ನು ಬೆನ್ನತ್ತಿದ್ದ ಲಕ್ನೋ ತಂಡ ಕೇವಲ 137 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 137 ರನ್ಗಳಿಗೆ ಆಲೌಟ್ ಆಯಿತು.
ಏಕಾನ ಸ್ಟೇಡಿಯಂನಲ್ಲಿ ನಡೆದ 54 ನೇ ಪಂದ್ಯದಲ್ಲಿ ಕೆಕೆಆರ್ ಪರವಾಗಿ ಓಪ್ನಿಂಗ್ ಬ್ಯಾಟರ್ ಆಗಿ ಕಣಕ್ಕಿಳಿದಿದ್ದರು. ಈ ಮ್ಯಾಚ್ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಸುನಿಲ್ ನರೈನ್ ಸಿಕ್ಸರ್ ಸರದಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.
ಪಂದ್ಯದ ಫಸ್ಟ್ ಓವರ್ನಿಂದಲೇ ಹೊಡಿಬಡಿ ಆಟವನ್ನಾಡಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದು, ಈ ಮೂಲಕ ಕೇವಲ 39 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 81 ರನ್ ಬಾರಿಸಿ ಔಟಾದರು. ಈ 7 ಸಿಕ್ಸ್ಗಳೊಂದಿಗೆ ಈ ಬಾರಿಯ ಐಪಿಎಲ್ನಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಸುನಿಲ್ ನರೈನ್ ಅಗ್ರಸ್ಥಾನಕ್ಕೇರಿದ್ದಾರೆ. ಇದಕ್ಕೂ ಮುನ್ನ ಮೊದಲ ಸ್ಥಾನದಲ್ಲಿ ಎಸ್ಆರ್ಹೆಚ್ ತಂಡದ ದಾಂಡಿಗ ಹೆನ್ರಿಕ್ ಕ್ಲಾಸೆನ್ ಇದ್ದರು.
ಹೈದ್ರಾಬಾದ್ ಪರ ಮಿಡೆಲ್ ಆರ್ಡರ್ನಲ್ಲಿ ಬ್ಯಾಟ್ ಬೀಸಿದ ಕ್ಲಾಸೆನ್ ಈವರೆಗೆ ಒಟ್ಟು 31 ಸಿಕ್ಸ್ಗಳನ್ನು ಬಾರಿಸಿದ್ದಾರೆ. ಇದೀಗ ಈ ಸಿಕ್ಸ್ಗಳ ಸಂಖ್ಯೆಯನ್ನು ದಾಟುವಲ್ಲಿ ನರೈನ್ ಯಶಸ್ವಿಯಾಗಿದ್ದಾರೆ. ಈ ಮೂಲಕ ಒಟ್ಟು 461 ರನ್ ಕಲೆಹಾಕಿರುವ ಸುನಿಲ್ ನರೈನ್ ಐಪಿಎಲ್ 2024ರ ರನ್ ಸರದಾರರ ಪಟ್ಟಿಯಲ್ಲೂ ಮೂರನೇ ಸ್ಥಾನಕ್ಕೇರಿದ್ದಾರೆ.