2024ರ ಐಪಿಎಲ್ ಟ್ರೋಫಿಯನ್ನ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಮೂರನೇ ಬಾರಿ ಕೆಕೆಆರ್ ಐಪಿಎಲ್ ಕಪ್ ಎತ್ತಿದೆ. ಟೂರ್ನಿ ಉದ್ದಕ್ಕೂ ಅದ್ಭುತ ಪ್ರದರ್ಶನವನ್ನ ನೀಡಿಕೊಂಡು ಬಂದಿದ್ದ ಕೆಕೆಆರ್ , ಫೈನಲ್ನಲ್ಲೂ ಸುನಾಮಿಯನ್ನೇ ಎಬ್ಬಿಸಿ ಹೈದರಾಬಾದ್ ಥಂಡಾ ಹೊಡೆಯೋ ಹಾಗೆ ಮಾಡಿದೆ.
10 ವರ್ಷದ ನಂತರ ಮತ್ತೆ ಕೆಕೆಆರ್ ಎತ್ತಿ ಹಿಡಿಯೋದಕ್ಕೆ ಕಾರಣ ಯಾರು.? ಅಫ್ಕೋರ್ಸ್ ಇದು ಟೀಂ ಎಫರ್ಟ್. ಆದರೇ ಕೆಕೆಆರ್ ಈ ಗೆಲುವಿನ ಹಿಂದಿರೋ ಶಕ್ತಿ ಅಂದ್ರೆ ಅದು ಗೌತಮ್ ಗಂಭೀರ್. ಗೌತಮ್ ಗಂಭೀರ್ ಇವರ ಆಟಿಟ್ಯೂಡ್ ಸಾಧಾರಣ ಯಾರಿಗೂ ಇಷ್ಟ ಆಗೋದಿಲ್ಲ. ಆದರೇ ಅದರಿಂದ ಆಚೆ ಬಂದರೇ ಗೌತಮ್ ಗಂಭೀರ್ ಒಬ್ಬ ಅದ್ಭುತ ಆಟಗಾರ. ಅದಕ್ಕಿಂತ ಮುಖ್ಯವಾಗಿ ಗಂಭೀರ್ ಸೋಲನ್ನು ದ್ವೇಷಿಸುವಂತಹ ಆಟಗಾರ. ಆತನಿಗೆ ಗೆಲ್ಲಬೇಕಷ್ಟೆ. ʼ
10 ವರ್ಷದ ಹಿಂದೆ 2002 ಮತ್ತು 2014 ರಲ್ಲಿ ಕೆಕೆಆರ್ ಐಪಿಎಲ್ ಚಾಂಪಿಯನ್ ಆಗಿತ್ತು. ಆ ಗೆಲುವಿಗೆ ಕಾರಣಕರ್ತ ಅಂದ್ರೆ ಅದು ಗೌತಮ್ ಗಂಭೀರ್. ಈವನ್ ಭಾರತ ಏಕದಿನ ವಲ್ಡ್ಕಪ್ ಗೆದ್ದಾಗಲೂ ಫೈನಲ್ನಲ್ಲಿ ಶ್ರೀಲಂಕಾ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ್ದು ಇದೇ ಗಂಭೀರ್. ಗಂಭೀರ್ ರನ್, ರೆಕಾರ್ಡ್ಗಿಂತ ಹೆಚ್ಚಾಗಿ ಬಯಸ್ತಾ ಇದ್ದಿದ್ದು ಗೆಲುವನ್ನ.
2014 ರ ನಂತರ ಎಂಥಾ ಘಟಾನುಘಟಿ ಬ್ಯಾಟ್ಸಮನ್ಗಳಿದ್ದರೂ ಕೂಡ ಕೆಕೆಆರ್ ಗೆ ಇದುವರೆಗೂ ಗೆಲ್ಲೋದಕ್ಕೆ ಆಗಿರಲಿಲ್ಲ. ಆಗ ಕೆಕೆಆರ್ ಮಾಲೀಕ ಶಾರುಖ್ ಖಾನ್ ಮತ್ತೆ ಗಂಭೀರ್ ಬಳಿ ಹೋಗ್ತಾರೆ. ಗಂಭೀರ್ಗೆ ಬ್ಲಾಂಕ್ ಚೆಕ್ ಕೊಟ್ಟು ನೀವು ನಮ್ಮ ತಂಡಕ್ಕೆ ಕೋಚ್ ಆಗಿ ಬರಬೇಕು ಅಂತ ಕರೆದುಕೊಂಡು ಬರ್ತಾರೆ.
ಯಾಕಂದ್ರೇ ಶಾರುಖ್ ಖಾನ್ಗೂ ಗೊತ್ತು ಗಂಭೀರ್ನ ತಾಕತ್ತು. ಕಳೆದ 9 ವರ್ಷಗಳಲ್ಲಿ ಕೆಕೆಆರ್ ತಂಡ 4 ಬಾರಿ ಪ್ಲೇ ಆಫ್ ತಲುಪಿದೆ, ಅದರಲ್ಲೊಮ್ಮೆ ಫೈನಲ್. ಆದರೆ ಚಾಂಪಿಯನ್’ ಶಿಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ಕಾರಣ, ತಂಡದ ಜೊತೆ ಗಂಭೀರ್ ಇರಲಿಲ್ಲ. ಈ ಬಾರಿ ಮೆಂಟರ್ ಆಗಿ ಕೆಕೆಆರ್ ಕ್ಯಾಂಪ್’ಗೆ ನುಗ್ಗಿದವನೇ ತಂಡವನ್ನು 3ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದಾನೆ.
ಶಾರುಖ್ ಖಾನ್ ಗಂಭೀರ್ಗೆ ಬ್ಲಾಂಕ್ ಚೆಕ್ಕನ್ನ ಕೊಟ್ಟು ಹೇಳಿದ್ದು ಒಂದೇ ಮಾತು. 10 ವರ್ಷಗಳಿಗೆ ನೀನು ನನಗೆ ಬೇಕು, ಅದಕ್ಕಾಗಿ ಎಷ್ಟು ಕೋಟಿಗಳನ್ನಾದರೂ ಬರೆದುಕೋ’’ ಅಂತ. ಗಂಭೀರ್ ಟೀಮ್ ಸೆಲೆಕ್ಷನ್ ಮಾಡೋದರಲ್ಲಿ. ಸ್ಟಾಟೆಜಿ ಮಾಡೋದರಲ್ಲಿ ನಿಪುಣ. ಗೆಲ್ಲೋದಕ್ಕೆ ಏನೆಲ್ಲಾ ಮಾಡಬೇಕೋ ಎಲ್ಲದಕ್ಕೂ ಗಂಭೀರ್ಗೆ ಶಾರುಖ್ ಖಾನ್ ಫ್ರೀ ಹ್ಯಾಂಡ್ ಕೊಟ್ಟಿದ್ದ. ಆಟಗಾರರ ಆಕ್ಷನ್ನಿಂದ ಫೈನಲ್ ಕಪ್ ಗೆಲ್ಲುವವರೆಗೂ ಗಂಭೀರ್ನ ಯಾವ ಡಿಸಿಷನ್ನನ್ನೂ ಕೂಡ ಕ್ವಶ್ಚನ್ ಮಾಡಲಿಲ್ಲ.
ಅದೆಷ್ಟು ಕೋಟಿ ಕೊಟ್ಟಾದರೂ ಸರಿ, ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ನನಗೆ ಬೇಕು’ ಅಂತ ಗಂಭೀರ್ ಅಂದಾಗ, ಶಾರುಖ್ ಖಾನ್ ಹೇಳಿದ್ದು ಒಂದೇ ಮಾತು, ‘go ahead’. ಆ 24 ಮುಕ್ಕಾಲು ಕೋಟಿ ಪ್ಲೇ ಆಫ್ ಮತ್ತು ಫೈನಲ್ನಲ್ಲಿ ಹೇಗೆ ಲಾಭ ತಂದು ಕೊಡ್ತು ಅನ್ನೋದನ್ನ ಕಣ್ಣಾರೆ ಕಂಡಿದ್ದೀವಿ. ಕೆಕೆಆರ್ ಕಪ್ ಗೆದ್ದಿದೆ ಅಂದ್ರೆ ಅದರ ಹಿಂದಿನ ಕಾರಣ ಈ ಇಬ್ಬರೇ.. ಒಬ್ಬರು ತಂಡದ ಮಾಲೀಕ ಶಾರುಖ್ ಖಾನ್ ಆದರೇ ಮತ್ತೊಬ್ಬರು ಗಂಭೀರ್..