ಮಹೇಂದ್ರ ಸಿಂಗ್ ಧೋನಿ ಗ್ರೌಂಡ್ ಗೆ ಎಂಟ್ರಿ ಕೊಟ್ರೆ ಸಾಕು ಭಾರೀ ಸದ್ದು ಕೇಳಿ ಬರುತ್ತದೆ. ಅಭಿಮಾನಿಗಳ ಕೇಕೆ, ಶಿಳ್ಳೆ, ಚಪ್ಪಾಳೆಗಳು ಜೋರಾಗಿರುತ್ತದೆ. ಕ್ರಿಕೆಟ್ ಅಭಿಮಾನಿಗಳು ಹೆಚ್ಚೆದ್ದು ಕುಣಿಯುತ್ತಾರೆ. ಧೋನಿ ಬ್ಯಾಟಿಂಗ್ಗೆ ಬಂದಾಗ ಮಾತ್ರ ಆಡಿಯನ್ಸ್ ಜಾಸ್ತಿ ಸೌಂಡ್ ಮಾಡ್ತಾರೆ ಅನ್ಕೊಂಡ್ರಾ. ಇಲ್ಲ ಅದಕ್ಕೂ ಮೀರಿದ ಸೌಂಡ್ ಕೇಕೆ, ಶಿಳ್ಳೆ, ಚಪ್ಪಾಳೆಗಳು ಬರುತ್ತೆ. ಅರೇ ಅದೇಲ್ಲಿ ಅಂತೀರಾ.
ಏಸ್.. ಧೋನಿ ಬ್ಯಾಟಿಂಗ್ ಎಂಟ್ರಿಗಿಂತ ಆರ್ಸಿಬಿ ಫೀಲ್ಡಿಂಗ್ ವೇಳೆ ಹೆಚ್ಚು ಸೌಂಡ್ ಆಗ್ತಿದೆ. ಸ್ವತಃ ಡೆಸಿಬಲ್ ಮೀಟರ್ ಈ ಸತ್ಯವನ್ನು ಬಹಿರಂಗಪಡಿಸಿದೆ. ಧೋನಿ ಬ್ಯಾಟಿಂಗ್ ಪ್ರವೇಶಕ್ಕಿಂತ ಆರ್ಸಿಬಿಯ ಫೀಲ್ಡಿಂಗ್ ಹೆಚ್ಚು ಸದ್ದು ಮಾಡಿದೆ. ಚೆನ್ನೈನಲ್ಲಿ ನಡೆದ ಪಂದ್ಯಗಳಲ್ಲಿ ಧೋನಿಯ ಎಂಟ್ರಿ ವೇಳೆ ಡೆಸಿಬಲ್ ಮೀಟರ್ ರೀಡಿಂಗ್ 123ಡಿಬಿ ಆಗಿತ್ತು. ಆದರೆ RCB ಫೀಲ್ಡಿಂಗ್ ವೇಳೆ ಈ ದಾಖಲೆ ಬ್ರೇಕ್ ಆಗಿದೆ.
ಮೊನ್ನೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಿತು. ಕ್ಯಾಮರೂನ್ ಗ್ರೀನ್ ಅವರು ಡೆಲ್ಲಿಯ ಸ್ಟಬ್ಸ್ರನ್ನು ರನೌಟ್ ಮಾಡಿದ್ರು. ಈ ವೇಳೆ ಡೆಸಿಬಲ್ ಮೀಟರ್ ಅಂಕಿ-ಅಂಶ 125ಕ್ಕೆ ತಲುಪಿದೆ. ಈ ಅಂಕಿ ಅಂಶವನ್ನು ನೋಡಿದ ನವಜೋತ್ ಸಿಂಗ್ ಸಿಧು.. ಧೋನಿ ಬಂದಾಗ ಸೌಂಡ್ 123ಡಿಬಿ ಇತ್ತು. ಆ ದಾಖಲೆ ಈಗ ಮುರಿದು ಬಿದ್ದಿದೆ ಎಂದು ಬಣ್ಣಿಸಿದ್ದಾರೆ.