ಐಪಿಎಲ್ 2024 ರ ರಣರೋಚಕ ಹೋರಾಟಕ್ಕೆ ವೇದಿಕೆ ಸಿದ್ಧವಾಗಿದೆ. ಇಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಪ್ಲೇಆಫ್ಗೆ ಪ್ರವೇಶಿಸಲಿದೆ.
ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಸೋತರೂ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಪ್ಲೇಆಫ್ಗೆ ಎಂಟ್ರಿ ಕೊಡಬಹುದು. ಏಕೆಂದರೆ ಸಿಎಸ್ಕೆ ತಂಡವು +0.528 ನೆಟ್ ರನ್ ರೇಟ್ನೊಂದಿಗೆ ಒಟ್ಟು 14 ಅಂಕಗಳನ್ನು ಹೊಂದಿದೆ. ಆದ್ರೆ ಆರ್ಸಿಬಿ ತಂಡ ನೆಟ್ ರನ್ ರೇಟ್ +0.387 ಇದ್ದು, 12 ಅಂಕಗಳನ್ನು ಹೊಂದಿದೆ.
ಆರ್ಸಿಬಿ ತಂಡವು ಪ್ಲೆಆಫ್ ಪ್ರವೇಶಿಸಬೇಕಿದ್ದರೆ 14 ಅಂಕಗಳನ್ನು ಕಲೆಹಾಕಿದರೆ ಮಾತ್ರ ಸಾಲುವುದಿಲ್ಲ. ಬದಲಾಗಿ ಸಿಎಸ್ಕೆ ತಂಡವನನು ನೆಟ್ ರನ್ ರೇಟ್ನಲ್ಲಿ ಹಿಂದಿಕ್ಕಬೇಕಿದೆ. ಇದಕ್ಕಾಗಿ ಸಿಎಸ್ಕೆ ನೀಡುವ ಗುರಿಯನ್ನು 11 ಎಸೆತಗಳು ಬಾಕಿಯಿರುವಂತೆ ಚೇಸ್ ಮಾಡಬೇಕು. ಇಲ್ಲ ಕನಿಷ್ಠ 18 ರನ್ಗಳಿಂದ ಭರ್ಜರಿ ಜಯ ಸಾಧಿಸಬೇಕು. ಅಂದರೆ ಆರ್ಸಿಬಿ 14 ಅಂಕಗಳೊಂದಿಗೆ ಸಿಎಸ್ಕೆ ತಂಡವನ್ನು ನೆಟ್ ರನ್ ರೇಟ್ನಲ್ಲಿ ಹಿಂದಿಕ್ಕಿ ಪ್ಲೇಆಫ್ಗೆ ಪ್ರವೇಶಿಸಬಹುದು.