ಲಖನೌ ಸೂಪರ್ ಜೈಂಟ್ಸ್ ಮಾಲೀಕ ಸಂಜೀವ್ ಗೋಯೆಂಕಾ ಅವರು ಕನ್ನಡಿಗ KL ರಾಹುಲ್ ಅವರನ್ನ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಹೀನಾಯವಾಗಿ ಸೋತಾಗ ಸ್ಟೇಡಿಯಂನಲ್ಲಿ ಕ್ಯಾಮೆರಾಗಳ ಮುಂದೆಯೇ ರಾಹುಲ್ ಗೆ ಹಿಗ್ಗಾ ಮುಗ್ಗಾ ಬೈದು ಸುದ್ದಿ ಆಗಿದ್ರು. ಸಂಜೀವ್ಗೆ ರಾಹುಲ್ ಫ್ಯಾನ್ಸ್ ಟ್ರೊಲ್ ಹಾಗೂ ಟೀಕೆಗಳ ಮೂಲಕ ಮಾಡಿ ಕಿಡಿಕಾರಿದ್ರು.
ರಾಹುಲ್ ನ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಬನ್ನಿ ಅಂತೆಲ್ಲ ಫ್ಯಾನ್ಸ್ ಅಹ್ವಾನಿಸಿದ್ರು. ಪತಿಯ ಅವಮಾನ ಕುರಿತು ಆಥಿಯಾ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ರಿಯಾಕ್ಟ್ ಕೂಡ ಮಾಡಿದ್ರು. ಸಂಜೀವ್ KL ರಾಹುಲ್ ನನ್ನು ಹಗ್ ಮಾಡುತಿರುವ ಚಿತ್ರ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಇದರ ನಡೆ ಏನಿರಬಹುದು ಎಂದೆಲ್ಲ ಚರ್ಚೆಯಾಗುತ್ತಿದೆ. ಇನ್ನು LSG ಅವರದ್ದು ಎರಡು ಪಂದ್ಯಗಳು ಬಾಕಿ ಇವೆ. ಪ್ಲೇ ಆಫ್ ಗೆ ಹೋಗಲು ಈ ಪಂದ್ಯಗಳನ್ನು ರಾಹುಲ್ ತಂಡ ಗೆಲ್ಲಬೇಕಿದೆ. ಇದರಿಂದ ಸಂಧಾನ ಮಾಡಿಕೊಳ್ತಾ ಇದ್ದಾರಾ ಸಂಜೀವ್ ಎಂದು ಫ್ಯಾನ್ಸ್ ಮಾತನಾಡಿಕೊಳ್ಳುತಿದ್ದಾರೆ. ಮನೆಗೆ ಊಟಕ್ಕೆ ಕರೆದ ಸಂಜೀವ್ ರಾಹುಲ್ ನನ್ನು ಹಗ್ ಮಾಡುವ ಮೂಲಕ ಬರಮಾಡಿಕೊಂಡಿದ್ದಾರೆ. ಅವಮಾನ ಮಾಡಿದವರು ಈಗ ಮನೆಗೆ ಕರೆದು ಸನ್ಮಾನ ಮಾಡ್ತಿದ್ದಾರೆ.