ಈ ಹೊಸ ಅಧ್ಯಾಯದ ಸಹವಾಸವೇ ಬೇಡಪ್ಪಾ..ಸಾಕೋ ಸಾಕು ಅನ್ನುವಾಗಲೇ ಮರುಭೂಮಿಯಲ್ಲಿ ಓಯಸಿಸ್ ಸಿಕ್ಕಹಾಗೆ ಆರ್ಸಿಬಿ ಅಂತೂ ಗೆಲ್ತಾ ಇದ್ದಾರೆ.. ನಿನ್ನೆ ಧರ್ಮಶಾಲಾ ದಲ್ಲಿ ನಡೆದ ಮ್ಯಾಚ್ ನಲ್ಲಿ ಪಂಜಾಬ್ ಕಿಂಗ್ಸ್ ನ 180 ಕ್ಕೆ ಎಲ್ಲ ಔಟ್ ಮಾಡಿ ಆರ್ಸಿಬಿ ಭರ್ಜರಿ ಗೆಲುವನ್ನ ಸಾಧಿಸಿದೆ ..
ಆರ್ಸಿಬಿ ವರ್ಸಸ್ ಪಂಜಾಬ್ ಕಿಂಗ್ಸ್ ಆರ್ಸಿಬಿ ಪ್ಲೇ ಆಫ್ಗೆ ಎಂಟ್ರಿ ಕೊಡಬೇಕಂದ್ರೇ ಈ ಮ್ಯಾಚ್ ಗೆಲ್ಲಲೇ ಬೇಕಿತ್ತು.. ಫೈನಲಿಗೆ ಬರಲು ನಮ್ಮ ಬೆಂಗಳೂರು ಬಾಯ್ಸ್ ಭರ್ಜರಿ 60 ರನ್ಗಳಿಂದ ವಿನ್ ಆಗಿದ್ದಾರೆ.. ಈ ಇಡೀ ಮ್ಯಾಚ್ನಲ್ಲಿ ಹೈಲೆಟ್ ಆಗಿದ್ದು ಕಿಂಗ್ ಕೊಹ್ಲಿ ಅವರ ಆಟ. 47 ಬಾಲ್ಗೆ 92 ರನ್ ಅದರಲ್ಲಿ 6 ಸಿಕ್ಸ್, 7 ಫೋರ್ಗಳ ಮೂಲಕ ಪಂಜಾಬ್ಗೆ ಸೋಲುಣಿಸಿದರು. ಕೊಹ್ಲಿಯ ಉಗ್ರಾವತಾರ ಹೆಂಗಿರುತ್ತೆ ಅಂತ ಧರ್ನಶಾಲಾದಲ್ಲಿ ನಡೆದ ಪಂಜಾಬ್ ಮತ್ತು ಆರ್ಸಿಬಿ ಮ್ಯಾಚ್ನಲ್ಲಿ ಕಾಣಬಹುದು.
ವಲ್ಡ್ ಕಪ್ ಟೀಮ್ ಸೆಲೆಕ್ಷನ್ ಆದಾಗ, ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ಪ್ರೆಸ್ ಮೀಟ್ ಮಾಡುವಾಗ ಯಾರೋ ಒಬ್ಬ ಕೊಹ್ಲಿಯನ್ನ ಟೀಮಲ್ಲಿ ಯಾಕೆ ಇಟ್ಕೊಂಡಿದ್ದೀರಾ ಅನ್ನೋ ಹಾಗೆ ಪ್ರಶ್ನೆ ಮಾಡಿದ್ದ.. ಅಂದ್ರೆ ಕೊಹ್ಲಿ ಅವರ ಸ್ಟ್ರೈಕ್ರೇಟ್ ತುಂಬಾ ಕಡಿಮೆ ಇದೆ.. ಟಿ 20 ಗೆ ಅವರು ಅನ್ಫಿಟ್ ಅನ್ನೋದು ಆ ಪ್ರಶ್ನೆಯ ಅರ್ಥ. ಆ ಪ್ರಶ್ನೆಗೆ ಅವತ್ತು ರೋಹಿತ್ ಶರ್ಮಾ ಅವರೇ ವ್ಯಂಗ್ಯವಾಗಿ ನಕ್ಕಿದ್ದರು.
ಈಗ ಪಂಜಾಬ್ ವಿರುದ್ಧ ಕೊಹ್ಲಿ ಅವರು ಆಡಿದ ಆಟ ನೋಡಿದಮೇಲೆ ಯಾರ್ಯಾರು ಕೊಹ್ಲಿ ಬಗ್ಗೆ ಮಾತಾಡಿದ್ರೋ.. ಸೋಶಿಯಲ್ ಮೀಡಿಯಾಗಳಲ್ಲಿ ಅಬ್ಬರಿಸ್ತಿದ್ರೋ ಎಲ್ಲಾ ತಣ್ಣಗಗೋಗಿದ್ದಾರೆ. ಹಾಗೇಯೇ ಕಿಂಗ್ ಕೋಹ್ಲಿ ಉತ್ತರ ಕೊಟ್ಟಿದ್ದಾರೆ. ಅದರಲ್ಲೂ ಆ ಒಂದು ಸಿಕ್ಸ್. ಏನ್ ಹೊಡೆದ್ರು.? ಅಂದ್ರೆ ಸೋಶಿಯಲ್ ಮೀಡಿಯಾದ ತುಂಬಾ ವೈರಲ್ ಆಗ್ತಿದೆ.
ಪಂಜಾಬ್ ಕಿಂಗ್ಸನ್ನ ಒಂದು ಹಂತದಲ್ಲಿ ಮ್ಯಾಚ್ ಗೆಲ್ಲೋ ಹಂತಕ್ಕೆ ಹೋಗ್ತಿತ್ತು. ರುಸೋ ಅದ್ಭುತವಾಗಿ 50 ಹೊಡೆದಿದ್ದರು. 50 ಹೊಡೆದಮೇಲೆ ಒಂದು ಸೆಲಬರೇಷನ್ ಮಾಡ್ತಾರೆ. ಬ್ಯಾಟನ್ನ ಗನ್ ಥರಹ ಹಿಡಿದುಕೊಂಡು ಆಕಾಶಕ್ಕೆ ತೋರಿಸಿದ್ದರು. ಅದಾಗಿ ಸ್ವಲ್ಪ ಹೊತ್ತಲ್ಲಿ ರುಸೋ ಕ್ಯಾಚ್ ಕೊಟ್ಟು ಔಟ್ ಆಗಿದ್ದರು.. ಆಗ ಕೊಹ್ಲಿ ಅದೇ ಆಕ್ಷನ್ನನ್ನ ರಿಪೀಟ್ ಮಾಡಿದ್ರು. ಈಗ ಆ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ನಲ್ಲಿದೆ.