ಐಪಿಎಲ್ 2024 ಹಿಂದೆಗಿಂತಲೂ ರಣರೋಚಕ ಘಟ್ಟ ತಲುಪಿದೆ. ಇಂದು ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ಮದಗಜಗಳ ಕಾಳಗ. RCB v/s CSK ಜಿದ್ದಾ ಜಿದ್ದಿನ ಪಂದ್ಯ ದಲ್ಲಿ CSK ತಂಡವನ್ನು ಸೋಲಿಸೊಕೆ RCB ಬಳಿ ಇರುವ ಆ “18 ರ” ಬ್ರಹ್ಮಾಸ್ತ್ರ ಈಗಾಗಲೇ ತುದಿಗಾಲಿನಲ್ಲಿ ಕಾಯುತ್ತಿದೆ.
ಏನಿದು 18. ರಹಸ್ಯ..?
“ಮೇ-18…… RCB ಗೆ ಬೇಕಿರುವ ಮೊತ್ತ-18………ಕೊಹ್ಲಿ ಜೇರ್ಸಿ-18”
ಈ ಮೈದಾನದಲ್ಲಿ RCB ಯ ಅತ್ಯುನ್ನತ ಸ್ಕೋರ್ ಎಂದರೆ 20 ಓವರ್ಗಳಲ್ಲಿ 263/5, ಇಲ್ಲಿ ಎಲ್ಲದಕ್ಕಿಂತ ಮುಖ್ಯ ಆರ್ಸಿಬಿ ಹುಲಿ ಕಿಂಗ್ ಕೊಹ್ಲಿ ಅವರೇ ಇಂದಿನ ಬ್ರಹ್ಮಾಸ್ತ್ರ.
CSK ವಿರುದ್ದ ಅಬ್ಬರದ ಬ್ಯಾಟಿಂಗ್ ಮಾಡಿ ತಮ್ಮ ವಿರಾಟ ದರ್ಶನ ತೋರಿಸಲು ತುದಿಗಾಲಿನಲ್ಲಿ ಇದ್ದಾರೆ. ಅಂದುಕೊಂಡಂತೆ ಎಲ್ಲವೂ ಆದರೆ ಇತಿಹಾಸ ಬರೆಯಲಿದೆಯಾ ಲಕ್ಕಿ ನಂಬರ್ 18.
ಮೇ 18.. ಆರ್ಸಿಬಿಯ ಟಾರ್ಗೆಟ್ ಕೂಡ 18..!
ಸಿಎಸ್ಕೆ VS ಆರ್ಸಿಬಿ ಪಂದ್ಯ ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿಗೆ ಸಾಮಾನ್ಯ ಗೆಲುವು ಸಾಕಾಗಲ್ಲ..ಹಾಗಾದ್ರೆ ಆರ್ ಸಿ ಬಿ ರನ್ರೆಟ್ ಹೆಚ್ಚಿಸಿಕೊಳ್ಳಬೇಕಂದ್ರೆ, ಭರ್ಜರಿ ಗೆಲುವು ಬೇಕೆ ಬೇಕು.
ಉದಾಹರಣೆಗೆ ಮೊದಲು ಬ್ಯಾಟಿಂಗ್ ನಡೆಸಿ 200 ರನ್ಗಳಿಸಿದ್ರೆ , 18 ರನ್ ಅಂತರದಲ್ಲಿ ಗೆಲ್ಲಬೇಕು. ಒಂದು ವೇಳೆ ಚೇಸಿಂಗ್ ಮಾಡಿದ್ರೆ, 18.1 ಓವರ್ಗಳಲ್ಲಿ ವಿನ್ ಆಗಬೇಕು. ಆಗ ಮಾತ್ರ ಆರ್ಸಿಬಿ ಪ್ಲೇ ಆಫ್ಗೆ ಎಂಟ್ರಿ ಕೊಡಲಿದೆ.