ಇಂದು ಎಂ. ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ RCB v/s CSK ಮಧ್ಯೆ ನಡೆಯಬೇಕಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಹೈವೋಲ್ಟೇಜ್ ಪಂದ್ಯ ರದ್ದಾಗುವ ಸಾಧ್ಯತೆ ಇದೆ. ರಾಜ್ಯ ಹವಾಮಾನ ಇಲಾಖೆ ನೀಡಿದ ಮುನ್ಸೂಚನೆಯಂತೆ ಬೆಂಗಳೂರಲ್ಲಿ ವರುಣನ ಆರ್ಭಟ ಶುರುವಾಗಿದ್ದು, ಇಂದಿನ ರೋಚಕ ಪಂದ್ಯ ರದ್ದುಗೊಳ್ಳಲಿದೆ ಎಂದು ವರದಿಯಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತಾನು ಆಡಿರೋ 13 ಪಂದ್ಯಗಳಲ್ಲಿ 6 ಪಂದ್ಯ ಗೆದ್ದು 12 ಅಂಕ ಗಳಿಸಿದೆ. ಪಾಯಿಂಟ್ಸ್ ಟೇಬಲ್ನಲ್ಲಿ ಸದ್ಯ 7ನೇ ಸ್ಥಾನದಲ್ಲಿದ್ದು ಆರ್ಸಿಬಿ ರನ್ ರೇಟ್ +0.387 ಇದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರ್ಸಿಬಿ ಕೇವಲ 18 ರನ್ನಿಂದ ಗೆದ್ದರೆ ಸಾಕು ಪ್ಲೇ ಆಫ್ಗೆ ಹೋಗೋದು ಪಕ್ಕಾ. ಒಂದು ವೇಳೆ ಚೇಸಿಂಗ್ ಮಾಡಿದ್ರೂ ಇನ್ನೂ 11 ಬಾಲ್ ಬಾಕಿ ಇರುವಂತೆ ಆರ್ಸಿಬಿ ಮ್ಯಾಚ್ ಗೆಲ್ಲಲೇಬೇಕು.