ಐಪಿಎಲ್ 2024ರ ಮೊದಲ ಎಂಟು ಪಂದ್ಯಗಳಲ್ಲಿ ಕೇವಲ ಒಂದು ಗೆಲುವು ಸಾಧಿಸಿದ್ದ ಆರ್ ಸಿ ಬಿ ಈಗ ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಪ್ಲೇ ಆಫ್ ಹಂತಕ್ಕೆ ತಲುಪಿದೆ. ಆರ್ಸಿಬಿ 27 ರನ್ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನ ಸೋಲಿಸಿ ಪ್ಲೇಆಫ್ನಲ್ಲಿ ಸ್ಥಾನ ಪಡೆದುಕೊಂಡಿತು. ಡುಪ್ಲೆಸಿಸ್ ತಂಡಕ್ಕೆ ಇದು ಸತತ ಆರನೇ ಗೆಲುವು..
ಆರ್ ಸಿ ಬಿ ತಂಡ ಪ್ಲೇ ಆಫ್ ಹಂತಕ್ಕೆ ಪ್ರವೇಶಿಸುತ್ತಿದ್ದಂತೆ ಆರ್ ಸಿ ಬಿಯ ಮಾಜಿ ಮಾಲಿಕ ಉದ್ಯಮಿ ವಿಜಯ ಮಲ್ಯ ಟ್ವಿಟ್ ಮಾಡಿ ಆರ್ ಸಿ ಬಿ ತಂಡಕ್ಕೆ ಶುಭ ಹಾರೈಸಿದ್ದಾರೆ.. ತಾವು ತಂಡದ ಮ್ಯಾನೆಜ್ಮೆಂಟ್ ನಲ್ಲಿ ಇಲ್ಲದಿದ್ರೂ ತಂಡವನ್ನ ಮರೆಯದ ವಿಜಯ್ ಮಲ್ಯ ಅವರ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ…
ಈ ಹಿಂದೆ ಆರ್ಸಿಬಿ ಮಹಿಳಾ ತಂಡ WPL ಟೂರ್ನಿಯ ಫೈನಲ್ನಲ್ಲಿ ಕಪ್ ಗೆದ್ದಾಗಲೂ ವಿಜಯ್ ಮಲ್ಯ ಅಭಿನಂದನೆ ಸಲ್ಲಿಸಿದ್ದರು. ಇದೀಗ ಚೆನ್ನೈ ವಿರುದ್ಧ ಆರ್ಸಿಬಿ ಗೆದ್ದು ಪ್ಲೇ ಆಫ್ಗೆ ಹೋಗಿದ್ದಕ್ಕೆ ಮಲ್ಯ ಶುಭಾಶಯಗಳನ್ನು ತಿಳಿಸಿದ್ದಾರೆ. RCB ಪುರುಷರ ತಂಡ ಐಪಿಎಲ್ ಗೆದ್ದರೆ ಈ ಖುಷಿ ಡಬಲ್ ಆಗಲಿದೆ. ತಂಡಕ್ಕೆ ಒಳ್ಳೆಯದಾಗಲಿ ಎಂದು ಮಲ್ಯ ಪೋಸ್ಟ್ ಮಾಡಿದ್ದಾರೆ…