ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಹೈ-ವೋಲ್ಟೇಜ್ ಪಂದ್ಯದಲ್ಲಿ CSK ವಿರುದ್ಧ 27 ರನ್ಗಳಿಂದ ಗೆದ್ದು ಬೀಗುವ ಮೂಲಕ RCB ಐಪಿಎಲ್ ಪ್ಲೇ ಆಫ್ ಗೆ ಗ್ರ್ಯಾಂಡ್ ಎಂಟ್ರಿ ನೀಡಿದೆ. ಈ ಪಂದ್ಯದಲ್ಲಿ RCB ಯನ್ನು ಬೆಂಬಲಿಸಲು ಸ್ಮೃತಿ ಮಂಧಾನ, ಅನುಷ್ಕಾ ಶರ್ಮಾ ಸೇರಿದಂತೆ ಗಣ್ಯರು ಬಂದಿದ್ದರು. ಇವರ ಜತೆಗೆ RCB ಮಾಜಿ ಲೆಜೆಂಡ್ ಕ್ರಿಸ್ ಗೇಲ್ ಕೂಡ ಬಂದಿದ್ದರು.
ಕೊಹ್ಲಿ ಮನವಿ..?
ಪಂದ್ಯ ಮುಗಿದ ಬಳಿಕ RCB ಡ್ರೆಸ್ಸಿಂಗ್ ರೂಮ್ಗೆ ಕ್ರಿಸ್ ಗೇಲ್ ಬಂದಿದ್ದು, ಆಗ ಮುಂದಿನ ವರ್ಷ 2025ರ IPL ಇಂಪ್ಯಾಕ್ಟ್ ಪ್ಲೇಯರ್ ಆಗಿ ಬನ್ನಿ ಎಂದು ಕ್ರಿಸ್ ಗೇಲ್ಗೆ ಕೊಹ್ಲಿ ಮನವಿ ಮಾಡಿದ್ದಾರೆ.
ದೊಸ್ತ್ ಗೇಲ್ ಮುಂದಿನ ವರ್ಷ ಆರ್ಸಿಬಿಗೆ ವಾಪಸ್ ಬನ್ನಿ. ಇಂಪ್ಯಾಕ್ಟ್ ಪ್ಲೇಯರ್ ರೂಲ್ ಬಂದಿದೆ. ನೀವು ಫೀಲ್ಡಿಂಗ್ ಮಾಡಬೇಕಾದ ಅಗತ್ಯ ಇಲ್ಲ. ನಿಮಗಾಗಿಯೇ ಇಂಪ್ಯಾಕ್ಟ್ ಪ್ಲೇಯರ್ ರೂಲ್ ತಂದಿದ್ದಾರೆ ಎಂದಿದ್ದಾರೆ ಕೊಹ್ಲಿ.