ಆರ್ಸಿಬಿ ಪ್ಲೇ ಆಫ್ ಹೋಗುತ್ತಾ..? ಒಂದು ವಾರದ ಹಿಂದೆ ಈ ಮಾತನ್ನು ಕೇಳಿದ್ರೆ ನೋ ವೇ ಚಾನ್ಸೇ ಇಲ್ಲ ಅಂತಿದ್ರು. ಆರು ಸತತ ಸೋಲಿನ ಬಳಿಕ ಪಾಯಿಂಟ್ಸ್ ಟೇಬಲ್ನಲ್ಲಿ ಕೊನೆಯ ಸ್ಥಾನದಲ್ಲಿತ್ತು. ಆರ್ಸಿಬಿ ಪ್ಲೇ ಆಫ್ ಹೋಗೋದಕ್ಕೆ ಇದ್ದಿದ್ದು ಕೇವಲ 1 ಪೆರ್ಸೆಂಟ್ ಚಾನ್ಸ್. ಆದರೆ ಲೀಗ್ನ ಅರ್ಧ ಪಂದ್ಯಗಳು ಮುಗಿದ ನಂತರ ಆರ್ಸಿಬಿ ಆಟವೇ ಬೇರೆಯಾಗಿತ್ತು. ಸತತ ಆರು ಪಂದ್ಯಗಳನ್ನ ಸೋತಿದ್ದ ಆರ್ಸಿಬಿ ನಂತರ ಸತತ ಆರು ಪಂದ್ಯಗಳನ್ನು ಗೆದ್ದು ಈಗ ಪ್ಲೇಆಫ್ ಹಂತಕ್ಕೆ ಲಗ್ಗೆ ಇಟ್ಟಿದೆ.
ಆರ್ಸಿಬಿ ಪ್ಲೇ ಆಫ್ಗೆ ಹೋಗಿದೆ ಅಂದ್ರೆ ಅದಕ್ಕೆ ಮುಖ್ಯ ಕಾರಣ ವಿರಾಟ್ ಕೊಹ್ಲಿ. ಅದರ ಜೊತೆಗೆ ವಿರಾಟ್ನ ಒಳಗಿದ್ದ ಕಿಡಿಯನ್ನ ದೊಡ್ಡದಾಗಿ ಹೊತ್ತಿ ಉರಿಯುವಂತೆ ಮಾಡಿದ ಅದೊಬ್ಬ. ಕೊಹ್ಲಿಯನ್ನ ಕೆಣಕದಿದ್ದರೇ ಆರ್ಸಿಬಿ ಇವತ್ತು ಪ್ಲೇ ಆಫ್ಗೆ ಬರುತ್ತಿರಲಿಲ್ಲ.. ವಿರಾಟ್ ಕೊಹ್ಲಿ ಅಷ್ಟೊಂದು ರಭಸವಾಗಿ ಬ್ಯಾಟ್ ಬೀಸದೇ ಇದ್ದಿದ್ದರೆ ಆರ್ಸಿಬಿ ಅಭಿಮಾನಿಗಳ ಕನಸು ನನಸಾಗುತ್ತಿರಲಿಲ್ಲ.
ಬಹುಶಃ ಸುನಿಲ್ ಗವಾಸ್ಕರ್ ಅವತ್ತು ವಿರಾಟ್ ಕೊಹ್ಲಿಯ ಸ್ಟ್ರೈಕ್’ರೇಟ್ ಬಗ್ಗೆ ಮಾತಾಡದೇ ಇದ್ದಿದ್ದರೆ ಆತನ ಎದೆಯೊಳಗೆ ಇಂಥಾ ಒಂದು ಕಿಚ್ಚು ಹೊತ್ತಿಕೊಳ್ಳುತ್ತಲೇ ಇರುತ್ತಿರಲಿಲ್ಲವೇನೋ.. ತನ್ನ ಇಡೀ ಕ್ರಿಕೆಟ್ ಜೀವನದಲ್ಲಿ ಒಬ್ಬ ದಿಗ್ಗಜನ ಬಗ್ಗೆ ವಿರಾಟ್ ಕೊಹ್ಲಿ ಯಾವತ್ತೂ ಇಷ್ಟೊಂದು ಆಕ್ರಮಣಕಾರಿಯಾಗಿ ಮಾತಾಡಿದ್ದಿಲ್ಲ. ಅಂಥಾ ಕೊಹ್ಲಿ ತನ್ನ ಸ್ಟ್ರೈಕ್’ರೇಟ್ ಪ್ರಶ್ನೆ ಮಾಡಿದ್ದ ಗವಾಸ್ಕರ್’ಗೆ ಮುಟ್ಟಿ ನೋಡಿಕೊಳ್ಳುವ ಹಾಗೆ ಉತ್ತರ ಕೊಟ್ಟಿದ್ದಾನೆ ಎಂದರೆ ಆತ ಕೆರಳಿದ್ದ ಎಂದೇ ಅರ್ಥ. ಗಾಯಗೊಂಡ ಸಿಂಹದ ಉಸಿರು ಘರ್ಜನೆಗಿಂತ ಭಯಂಕರ..
ವಿರಾಟ್ ಕೊಹ್ಲಿಯ ಎದೆಯಲ್ಲಿ ಧಗಧಗಿಸಿದ ಆ ಬೆಂಕಿ. ಭರವಸೆಗಳೇ ಬತ್ತಿ ಹೋಗಿದ್ದ RCB ಆಟಗಾರರ ಎದೆಯಲ್ಲಿ ಗೆಲುವಿನ ಕಿಚ್ಚು ಹೊತ್ತಿಸಿ ಬಿಟ್ಟಿತ್ತು. ಮೊದಲ 8 ಪಂದ್ಯಗಳಲ್ಲಿ ಕೇವಲ ಒಂದನ್ನು ಗೆದ್ದು 7ರಲ್ಲಿ ಸೋತು ಕೂತಿದ್ದಾಗ, ಆರ್’ಸಿಬಿ ಪ್ಲೇ ಆಫ್ ತಲುಪಿಯೇ ತಲುಪಲಿದೆ ಎಂದು ಅದೆಷ್ಟು ಮಂದಿಗೆ ಅನಿಸಿರಲು ಸಾಧ್ಯ..? ಆರ್’ಸಿಬಿಯನ್ನು ಇವತ್ತು ಇಲ್ಲಿಗೆ ತಂದು ನಿಲ್ಲಿಸಿದ್ದು ವಿರಾಟ್ ಕೊಹ್ಲಿಯ ಎನರ್ಜಿ ಮತ್ತು ಆತನ ಅಮೋಘ ಬ್ಯಾಟಿಂಗ್.
ಕೊಹ್ಲಿಗೆ ದೊಡ್ಡ ದೊಡ್ಡ ಸಿಕ್ಸರ್’ಗಳನ್ನು ಬಾರಿಸಲು ಬರುವುದಿಲ್ಲ ಎಂದರು. ಆದರೆ ಕೊಹ್ಲಿ ಹೊಡೆದ ಸಿಕ್ಸ್ ಒಂದು ಚಿನ್ನಸ್ವಾಮಿ ಕ್ರೀಡಾಂಗಣದ ರೂಫ್ಟಾಪ್ ಗೆ (ಮೇಲ್ಛಾವಣಿ) ಬಡಿದು ಬಿಟ್ಟಿತು. ಅವರು ಅವನ aerial shots ಬಾರಿಸುವ ability ಯನ್ನೇ ಪ್ರಶ್ನಿಸಿದರು. ಆತ ಈ ಐಪಿಎಲ್’ನಲ್ಲೇ ಅತೀ ಹೆಚ್ಚು (37) ಸಿಕ್ಸರ್’ಗಳನ್ನು ಚಚ್ಚಿ ಬಿಸಾಕಿದ. ಮತ್ತು ಇದು ಇಲ್ಲಿಗೇ ಮುಗಿದಿಲ್ಲ. ಸುನೀಲ್ ಗವಾಸ್ಕರ್ ಕೊಹ್ಲಿಯನ್ನ ಕೆಣಕಿದ್ದಾರೆ. ಇದು ಕಂಡಿತಾ ಇಲ್ಲಿಗೆ ಮುಗಿಯುವುದಿಲ್ಲ.