ಐಪಿಎಲ್ 2024 ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ಮತ್ತು ಆರ್ಸಿಬಿ ಸೆಣಸಾಟ ನಡೆಯಲಿವೆ. ಈ ಎರಡು ತಂಡದ ಪಂದ್ಯವು ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತದೆ. ಸಂಜೆ 7 .30ಕ್ಕೆ ಈ ಎರಡು ತಂಡಗಳು ಮೈದಾನಕ್ಕೆ ಇಳಿಯಲಿದೆ. ಆದರೆ ಇಂದಿನ ಪಂದ್ಯ ಕಾಣಲು ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ನಡುವೆ ಬಹು ಮುಖ್ಯವಾದ ಪಂದ್ಯವಾಗಿದೆ. ಏಕೆಂದರೆ ಎಲಿಮಿನೇಟರ್ ಪಂದ್ಯ ಇದಾಗಿದ್ದು, ಇತ್ತಂಡಗಳಿಗೆ ಇದು ಮುಖ್ಯವಾಗಿದೆ. ಇನ್ನು ರಾಜಸ್ಥಾನ್ ತಂಡಕ್ಕೆ ಈ ಹಿಂದೆ ಮಳೆಯಿಂದಾಗಿ 2 ಪಂದ್ಯ ರದ್ದಾಗಿತ್ತು. ಹಾಗಾಗಿ ಪಾಯಿಂಟ್ ಟೇಬಲ್ನಲ್ಲಿ ನಷ್ಟ ಅನುಭವಿಸಿತ್ತು.