ಐಪಿಎಲ್ನ 17 ನೇ ಋತುವಿನಲ್ಲಿ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ಹಲವರನ್ನು ಟೀಕಿಸಿ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದರು. ರಾಯುಡು ಅವರು ವಿರಾಟ್ ಕೊಹ್ಲಿಯನ್ನು ಟೀಕಿಸುತ್ತಿದ್ದರು. ಐಪಿಎಲ್ 2024ರಲ್ಲಿ ವಿರಾಟ್ ಕೊಹ್ಲಿ 15 ಪಂದ್ಯಗಳಲ್ಲಿ 741ರನ್ ಗಳಿಸಿ ಆರೆಂಜ್ ಕ್ಯಾಪ್ ವಿಜೇತರಾಗಿದ್ದರು. ಎರಡನೇ ಸ್ಥಾನದಲ್ಲಿದ್ದ ರಿತುರಾಜ್ ಗಾಯಕ್ವಾಡ್ 583 ರನ್ ಗಳಿಸಿದ್ದು, ಅವರ ಹತ್ತಿರಕ್ಕೂ ಸುಳಿಯಲಿಲ್ಲ. ಹೀಗಿರುವಾಗ ರಾಯುಡು ಅವರ ಮತ್ತೊಂದು ವಿಡಿಯೋ ಹೊರಬಿದ್ದಿದ್ದು, ಕೊಹ್ಲಿ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.
ಐಪಿಎಲ್ 2024 ರಲ್ಲಿ ವಿರಾಟ್ ಕೊಹ್ಲಿ ಅವರ ಕಾರ್ಯವೈಖರಿಯನ್ನು ಅನುಭವಿ ಕ್ರಿಕೆಟಿಗರು ಶ್ಲಾಘಿಸಿದರೆ, ಟೀಂ ಇಂಡಿಯಾ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ಕ್ರಿಕಟಿಗ ಅಂಬಟಿ ರಾಯುಡು ಅವರು ಕೊಹ್ಲಿ ಬಗ್ಗೆ ಹಲವು ಕಾಮೆಂಟ್ ಮಾಡಿದ್ದು, ಅದಕ್ಕಾಗಿ ಅವರು ತೀವ್ರವಾಗಿ ಟ್ರೋಲ್ ಆಗುತ್ತಿದಾರೆ.
ಮ್ಯಾಥ್ಯೂ ಹೇಡನ್, ಕೆವಿನ್ ಪೀಟರ್ಸನ್, ಅಂಬಟಿ ರಾಯುಡು ಮತ್ತು ಮಾಯಾಂತಿ ಲ್ಯಾಂಗರ್ ಅವರು ಸ್ಟಾರ್ ಸ್ಪೋರ್ಟ್ಸ್ನಲಲಿ ಆರ್ಸಿಬಿ ಪ್ರದರ್ಶನದ ಬಗ್ಗೆ ಚರ್ಚಿಸುತ್ತಿದ್ದರು. ಈ ಸಮಯದಲ್ಲಿ ರಾಯುಡು ಕೊಹ್ಲಿಯ ಆರೆಂಜ್ ಕ್ಯಾಪ್ ಬಗ್ಗೆ ಹೇಳಿದರು. ಇದಕ್ಕೆ ಕೆವಿನ್ ಪೀಟರ್ಸನ್ ಮತ್ತು ಮಾಯಾಂತಿ ಲ್ಯಾಂಗರ್ ಕಟುವಾಗಿ ಟೀಕಿಸಿದರು. ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ವಿರಾಟ್ ಕೊಹ್ಲಿ ತಮ್ಮ ಗುಣಮಟ್ಟವನ್ನು ಸ್ವಲ್ಪ ಕಡಿಮೆ ಮಾಡಬೇಕು ಎಂದು ರಾಯುಡು ಅಭಿಪ್ರಾಯಪಟ್ಟಿದ್ದರು. ಇದು ತಂಡದ ಯುವ ಕ್ರಿಕೆಟಿಗರ ಮೇಲೆ ಅತಿಯಾದ ಒತ್ತಡವನ್ನು ಬೀರುತ್ತದೆ ಎಂದು ಹೇಳಿದರು.
ರಾಯುಡು, ‘ವಿರಾಟ್ ಕೊಹ್ಲಿ ತಮ್ಮ ತಂಡದ ದಂತಕಥೆ, ಅವರು ತಂಡದ ಯುವ ಆಟಗಾರರು ಒತ್ತಡಕ್ಕೆ ಒಳಗಾಗುವಷ್ಟು ಉನ್ನತ ಗುಣಮಟ್ಟದ ಪ್ರದರ್ಶನ ನೀಡುತ್ತಿದ್ದಾರೆ. ಯುವ ಆಟಗಾರರು ಡ್ರೆಸ್ಸಿಂಗ್ ರೂಮ್ನಲ್ಲಿ ಉತ್ತಮ ಮನಸ್ಥಿತಿಯಲ್ಲಿ ಉಳಿಯಲು ವಿರಾಟ್ ತಮ್ಮ ಗುಣಮಟ್ಟವನ್ನು ಸ್ವಲ್ಪ ಕಡಿಮೆ ಮಾಡಬೇಕು ಎಂದು ಹೇಳಿದರು. ಇದಕ್ಕೆ ಅಡ್ಡಿಪಡಿಸಿದ ಕೆವಿನ್ ಪೀಟರ್ಸನ್, ‘ಉನ್ನತ ಗುಣಮಟ್ಟವನ್ನು ಹೊಂದಿರುವುದು ಒಳ್ಳೆಯದು’ ಎಂದು ರಾಯುಡುಗೆ ಹೇಳಿದರು.
ಅದಕ್ಕೆ ರಾಯುಡು, ಹೌದು ಆದರೆ ಇದು ಯುವಕರ ಮೇಲೆ ಒತ್ತಡ ಹೇರುತ್ತದೆ ಎಂದರು. ಆಗ ಮಾಯಾಂತಿ ಲ್ಯಾಂಗರ್ ಅವರು ರಜತ್ ಪಾಟಿದಾರ್ ಅವರ ಉದಾಹರಣೆಯನ್ನು ನೀಡಿದರು. ಅವರು ತಂಡಕ್ಕಾಗಿ ಅದ್ಭುತ ಪ್ರದರ್ಶನ ನೀಡಿದರು ಎಂದು ಹೇಳಿದರು. ಹೌದು ಆದರೆ ವಿರಾಟ್ ಕೊಹ್ಲಿ ವಿರಾಟ್ ಕೊಹ್ಲಿಯೇ ಮತ್ತು ರಜತ್ ಪಾಟಿದಾರ್, ರಜತ್ ಪಾಟಿದಾರ್ ಎಂದು ರಾಯುಡು ಹೇಳಿದರು. ಇದಕ್ಕೆ ಪೀಟರ್ಸನ್ ನೀನು ಒಬ್ಬ ಜೋಕರ್ ಎಂದು ಹೇಳಿದ್ದು ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಕೂಡ ರಾಯುಡು ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದಾರೆ.