ಐಪಿಎಲ್ ಸೀಸನ್ 17 ಹಿಂದೆದಿಗಿಂತಲೂ ರಣರೋಚಕ ಘಟ್ಟ ತಲುಪಿದೆ. ಪ್ರತಿ ತಂಡಗಳು ಪ್ಲೇ ಆಫ್ ಎಂಟ್ರಿಗಾಗಿ ಮದಗಜಗಳಂತೆ ಜಿದ್ದಾ ಜಿದ್ದಿನ ಹೋರಾಟ ನಡೆಸುತ್ತಿವೆ. ಅದರಲ್ಲೂ ಎಲ್ರೂ ಆರ್ಸಿಬಿ ಕಥೆ ಮುಗಿದೇ ಹೋಯ್ತು ಅಂದುಕೊಂಡಿದ್ರು. ಆದ್ರೆ ಎಲ್ಲರ ಲೆಕ್ಕಾಚಾರನ್ನು ತಲೆ ತಳಗಾಗುವಂತೆ ಆರ್ಸಿಬಿ ಕಮ್ಬ್ಯಾಕ್ ಮಾಡಿದೆ.
18.ರಲ್ಲಿ ಅಡಗಿದೆ ರಾಯಲ್ ಚಾಲೆಂಜರ್ಸ್.. ರಾಯಲ್ ಅದ್ಯಾಯ…!
ಪಾಯಿಂಟ್ಸ್ ಟೇಬಲ್ನಲ್ಲಿ 10ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಜಂಪ್ ಆಗಿದ್ದ ಆರ್ಸಿಬಿ ಇದೀಗ 5ನೇ ಸ್ಥಾನಕ್ಕೆ ಜಿಗಿದಿದೆ. ಡೆಲ್ಲಿ ವಿರುದ್ಧದ ಗೆಲುವು ಪ್ಲೇ ಆಫ್ ಎಂಟ್ರಿಯ ಅವಕಾಶವನ್ನ ಇನ್ನಷ್ಟು ಹೆಚ್ಚಿಸಿದೆ. ಮುಂದಿನ ಪಂದ್ಯದಲ್ಲಿ ಗೆದ್ರೆ, ಪ್ಲೇ ಆಫ್ಗೆ ಲೆಕ್ಕಾಚಾರ ಎಲ್ಲೆಡೆ ಶುರುವಾಗಿದೆ. ಅಸಲಿಗೆ ಸಿಎಸ್ಕೆ ವಿರುದ್ಧ ಗೆದ್ರೆ, ಆರ್ಸಿಬಿ ಪ್ಲೇ ಆಫ್ಗೆ ಎಂಟ್ರಿ ಕೊಡೋಕೆ ಆಗಲ್ಲ.. ಅಲ್ಲೂ ಅದೃಷ್ಟ ಕೈ ಹಿಡಿಯಲೇಬೇಕಿದೆ.
ಏನೀದು 18. ರಹಸ್ಯ..?
ಮೇ 18.. ಆರ್ಸಿಬಿಯ ಟಾರ್ಗೆಟ್ ಕೂಡ 18..! ಅಂದುಕೊಂಡತೆ ಲಕ್ನೋ, ಡೆಲ್ಲಿ ತಂಡಗಳು ಪ್ಲೇ ಆಫ್ ರೇಸ್ನಿಂದ ಔಟಾದ್ರೆ ಮೇ 18ರಂದು ನಡೆಯೋ ಸಿಎಸ್ಕೆ VS ಆರ್ಸಿಬಿ ಪಂದ್ಯ ಎಲಿಮಿನೇಟರ್ ಸ್ವರೂಪ ಪಡೆದುಕೊಳ್ಳಲಿದೆ. ಈ ಪಂದ್ಯದಲ್ಲಿ ಆರ್ಸಿಬಿಗೆ ಸಾಮಾನ್ಯ ಗೆಲುವು ಸಾಕಾಗಲ್ಲ..ಹಾಗಾದ್ರೆ ಆರ್ ಸಿ ಬಿ ರನ್ರೇಟ್ ಹೆಚ್ಚಿಸಿಕೊಳ್ಳಬೇಕಂದ್ರೆ, ಭರ್ಜರಿ ಗೆಲುವು ಬೇಕೆ ಬೇಕು. ಉದಾಹರಣೆಗೆ ಮೊದಲು ಬ್ಯಾಟಿಂಗ್ ನಡೆಸಿ 200 ರನ್ಗಳಿಸಿದ್ರೆ, 18 ರನ್ ಅಂತರದಲ್ಲಿ ಗೆಲ್ಲಬೇಕು. ಒಂದು ವೇಳೆ ಚೇಸಿಂಗ್ ಮಾಡಿದ್ರೆ, 18.1 ಓವರ್ಗಳಲ್ಲಿ ವಿನ್ ಆಗಬೇಕು. ಆಗ ಮಾತ್ರ ಆರ್ಸಿಬಿ ಪ್ಲೇ ಆಫ್ಗೆ ಎಂಟ್ರಿ ಕೊಡಲಿದೆ.
ಸತತ 6 ಸೋಲುಗಳನ್ನು ಕಂಡು ಇದೀಗ ಸತತವಾಗಿ 5 ಪಂದ್ಯ ಗೆದ್ದಿರೋ ಆರ್ಸಿಬಿ ಆಟ ಮೊದಲಿನಂತಿಲ್ಲ. ಜೊತೆಗೆ ಆರ್ ಸಿ ಬಿ ಡೈ ಹಾರ್ಡ್ ಪ್ಯಾನ್ಸ್ ಪ್ರಾರ್ಥನೆಯೋ ಏನೋ, ಆ ದೇವರು ಕೂಡ ಆರ್ ಸಿ ಬಿ ಪರ ನಿಂತಂತಿದೆ. ಪ್ರತಿ ಪಂದ್ಯದಲ್ಲೂ ಅದೃಷ್ಟ ಕೈ ಹಿಡಿದಿದೆ. ಈ ಅದೃಷ್ಟದಾಟ ನೋಡಿದ್ರೆ, ಆರ್ಸಿಬಿ ಪ್ಲೇ ಆಫ್ಗೆ ಎಂಟ್ರಿ ಕೊಡೋದಲ್ಲ. ಕಪ್ ಗೆದ್ರೂ ಆಶ್ಚರ್ಯಪಡಬೇಕಿಲ್ಲ.