ಐಪಿಎಲ್ ಆಕ್ಷನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ವಪ್ನಿಲ್ ಸಿಂಗ್ ಅವರನ್ನ ಖರೀದಿಸಿತ್ತು. ಆರಂಭದ ಐಪಿಎಲ್ ನ ಪಂದ್ಯಗಳಲ್ಲಿ ಆರ್ ಸಿಬಿಯು ಎಲ್ಲ ಮ್ಯಾಚ್ ಗಳನ್ನು ಸೋತಿತ್ತು. ಆಡಿದ 7 ಮ್ಯಾಚ್ ಗಳಲ್ಲಿ 6 ಮ್ಯಾಚುಗಳನ್ನು ಸೋತಿತ್ತು.
ಇದಾದ ಬಳಿಕ ಆರ್ ಸಿಬಿ ಫ್ರಾಂಚೈಸಿ ಎಡಗೈ ಸ್ಪಿನ್ನರ್ ಸ್ವಾಪ್ನಿಲ್ ಸಿಂಗ್ ಅವರನ್ನ ಕಣಕ್ಕಿಳಿಸಿತ್ತು. ವಿಶೇಷವೆಂದರೆ ಸ್ವಾಪ್ನಿಲ್ ಸಿಂಗ್ ಅವರು ಆ ಬಳಿಕ ಆಡಿದ ಎಲ್ಲಾ ಮ್ಯಾಚ್ಗಳನ್ನ ಆರ್ ಸಿಬಿ ಗೆಲ್ಲುತ್ತಲೇ ಬಂದಿತ್ತು. ಇದರಿಂದ RCB ಅಭಿಮಾನಿಗಳು ಸ್ವಾಪ್ನಿಲ್ ಅವರನ್ನ ಲಕ್ಕಿ ಚಾರ್ಮ್ ಎಂದು ಕರಿಯಲು ಶುರುಮಾಡಿದ್ರು.
ಸ್ವಾಪ್ನಿಲ್ 2008 ರಿಂದ ಐಪಿಎಲ್ ನಲ್ಲಿದ್ದರೂ ಸಹ ಅವರ ಹೆಸರು ಯಾರಿಗೂ ಅಷ್ಟರ ಮಟ್ಟಿಗೆ ಪರಿಚಿತವಾಗಿರಲಿಲ್ಲ. ಆರ್ ಸಿಬಿಯಲ್ಲಿ ಆಡಿದ ಬಳಿಕ ಇವರು ಅಭಿಮಾನಿಗಳಿಗೆ ಚಿರ ಪರಿಚಿತರು. ಇಲ್ಲಿಯವರೆಗು ಅವರು ಕೇವಲ 18 ಮ್ಯಾಚ್ಗಳನ್ನು ಮಾತ್ರ ಆಡಿದ್ದಾರೆ.
ವಿರಾಟ್ ಜೊತೆಗಿನ ಬಾಂಧವ್ಯವನ್ನು ನೆನಪಿಸಿಕೊಂಡ ಸ್ವಪ್ನಿಲ್, ತಾನು ವಿರಾಟ್ನೊಂದಿಗೆ U15 ಮತ್ತು U19 ಮಟ್ಟದ ಕ್ರಿಕೆಟ್ ಆಡಿದ್ದಾರೆ. ಶ್ರೀಲಂಕಾ ಮತ್ತು ಮಲೇಷ್ಯಾ ಪ್ರವಾಸಗಳಲ್ಲಿ ಸ್ವಾಪ್ನಿಲ್ ಮತ್ತು ವಿರಾಟ್ ರೂಮ್ಮೇಟ್ ಆಗಿದ್ದೆವು. ಇದೀಗ ಹಲವು ವರ್ಷಗಳ ಬಳಿಕ ಕೊಹ್ಲಿ ಜೊತೆಯಾಗಿ ಆರ್ಸಿಬಿಯಲ್ಲಿ ಆಡುತ್ತಿದ್ದೇವೆ. ಈ ವೇಳೆ ನಾವಿಬ್ಬರೂ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದೇವೆ ಎಂದು ಹೇಳಿದ್ದಾರೆ.