ನಿನ್ನೆ ನಡೆದ ಎಲಿಮಿನೇಟರ್ 1 ಪಂದ್ಯವನ್ನಾ ರಾಜಸ್ಥಾನ್ ರಾಯಲ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ನಾಲ್ಕು ವಿಕೆಟ್ಗಳಿಂದ ಸೋಲಿಸಿ ಕ್ವಾಲಿಫೈಯರ್-2 ಗೆ ಅರ್ಹತೆ ಪಡೆದುಕೊಂಡಿದೆ. ಸತತ ಆರು ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ಲೇಆಫ್ಗೆ ಅರ್ಹತೆ ಪಡೆದುಕೊಂಡಿದ್ದ ಆರ್ಸಿಬಿ ಪಯಣ ಇಲ್ಲಿಗೆ ಅಂತ್ಯಗೊಂಡಿದೆ.
ಮ್ಯಾಚ್ನಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 173 ರನ್ ಗಳಿಸಿತ್ತು. ಇದಕ್ಕೆ ಪ್ರತಿ ಉತ್ತರವಾಗಿ ರಾಜಸ್ಥಾನ 19 ಓವರ್ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಭದ್ರತೆ ವಿಚಾರದಲ್ಲಿ ಕೊರತೆ ಕಂಡುಬಂದ ಕಾರಣ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯಕ್ಕೂ ಮುನ್ನ ನಡೆಸಬೇಕಿದ್ದ ತನ್ನ ಏಕೈಕ ನೆಟ್ಸ್ ಅಭ್ಯಾಸವನ್ನು ರದ್ದು ಮಾಡಿದ್ದೆ, ಇದೇ ಆರ್ಸಿ ಬಿ ಸೋಲಿಗೆ ಕಾರಣವಾಯ್ತು ಎಂಬ ಮಾತುಗಳು ಕೇಳಿ ಬರುತ್ತಿವೆ.
ಇಲ್ಲಿನ ಗುಜರಾತ್ ಕಾಲೇಜು ಮೈದಾನದಲ್ಲಿ ಆರ್ಸಿಬಿ ಮಂಗಳವಾರ ಅಭ್ಯಾಸ ನಡೆಸಬೇಕಿತ್ತು. ಈ ವೇಳೆ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ಭದ್ರತೆ ಬಗ್ಗೆ ಅನುಮಾನ ಉಂಟಾದ ಕಾರಣ ನೆಟ್ಸ್ ಅಭ್ಯಾಸವನ್ನೇ ಆರ್ಸಿಬಿ ಟೀಮ್ ಮ್ಯಾನೇಜ್ಮೆಂಟ್ ರದ್ದು ಪಡಿಸಿತ್ತು.