- ಇರಾನ್ ನಲ್ಲಿರುವ ಚಾಬಹಾರ್ ಬಂದರುವನ್ನು ನಿರ್ವಹಣೆ ಭಾರತಕ್ಕೆ ಅವಕಾಶ ನೀಡುವಂತಹ ಒಪ್ಪಂದ ಆಗಲಿದೆ.
- ಪೋರ್ಟ್ ಸಂಬಂಧ ಇಂದೇ ಎರಡೂ ದೇಶಗಳ ಮಧ್ಯೆ ಒಪ್ಪಂದಕ್ಕೆ ಸಹಿ ಬೀಳಲಿದೆ.
- ಮಧ್ಯ ಏಷ್ಯಾ ದೇಶಗಳನ್ನು ತಲುಪಲು ಭಾರತಕ್ಕೆ ಈಗ ಚಾಬಹಾರ್ ಪೋರ್ಟ್ ಸಹಾಯವಾಗುತ್ತದೆ.
ಭಾರತ ತನ್ನ ಬಲವಾದ ರಾಜತಾಂತ್ರಿಕ ನೀತಿಗೆ ಹೆಸರುವಾಸಿ, ಇಂದು ಅಂತದ್ದೇ ಒಂದು ಮಹತ್ವದ ನಡೆಗೆ ಭಾರತ ಮುಂದಾಗಿದೆ. ಇರಾನ್ ನಲ್ಲಿರುವ ಚಾಬಹಾರ್ ಬಂದರುವನ್ನು ಮುಂದಿನ 10 ವರ್ಷ ನಿರ್ವಹಣೆ ಮಾಡುವ ಭಾರತಕ್ಕೆ ಅವಕಾಶ ನೀಡುವಂತಹ ಒಪ್ಪಂದ ಆಗಲಿದೆ.
ಪೋರ್ಟ್ ಸಂಬಂಧ ಇಂದೇ ಎರಡೂ ದೇಶಗಳ ಮಧ್ಯೆ ಒಪ್ಪಂದಕ್ಕೆ ಸಹಿ ಬೀಳಲಿದೆ. ಈ ಬೆಳವಣಿಗೆ ಆಗಿದ್ದೇ ಆದಲ್ಲಿ ಇದೊಂದು ಮಹತ್ವದ ಐತಿಹಾಸಿಕ ನಡೆಯಾಗಿರುತ್ತದೆ. ಭಾರತದ ಅಂತಾರಾಷ್ಟ್ರೀಯ ವಹಿವಾಟಿಗೆ ಇದು ಪುಷ್ಟಿ ಕೊಡಲಿದೆ. ವಿದೇಶದಲ್ಲಿರುವ ಪೋರ್ಟ್ ವೊಂದರ ಮ್ಯಾನೇಜ್ಮೆಂಟ್ ಅನ್ನು ಭಾರತ ಇದೇ ಮೊದಲ ಬಾರಿಗೆ ಪಡೆಯಲಿರುವುದು.
ಮಧ್ಯ ಏಷ್ಯಾ ದೇಶಗಳನ್ನು ತಲುಪಲು ಭಾರತಕ್ಕೆ ಈಗ ಚಾಬಹಾರ್ ಪೋರ್ಟ್ ಸಹಾಯವಾಗುತ್ತದೆ. ಇರಾನ್ ನ ದಕ್ಷಿಣ ಭಾಗದಲ್ಲಿರುವ ಚಾಬಹಾರ್ ಪೋರ್ಟ್ ಮತ್ತು ಪಾಕಿಸ್ತಾನದ ಬಲೂಚಿಸ್ತಾನದಲ್ಲಿರುವ ಗ್ವಾದರ್ ಪೋರ್ಟ್ ಎರಡೂ ಬಹಳ ಸಮೀಪ ಇದೆ. ಗ್ವಾದರ್ ಪೋರ್ಟ್ ಚೀನಾದ ಮಹತ್ವಾಕಾಂಕ್ಷೆಯ ಬಿಆರ್ ಐ ಯೋಜನೆಯ ಭಾಗವಾಗಿದೆ. ಭಾರತಕ್ಕೆ ಪರ್ಯಾಯ ಆಯ್ಕೆ ಎಂದರೆ ಚಾಬಹಾರ್ ಪೋರ್ಟ್. ಆಫ್ಘಾನಿಸ್ತಾನ್ ಮತ್ತು ಸೆಂಟ್ರಲ್ ಏಷ್ಯಾನ್ ದೇಶಗಳನ್ನು ತಲುಪಲು ಈ ಪೋರ್ಟ್ ಸಹಕಾರಿ ಆಗುತ್ತದೆ.