ವಾಲ್ಮೀಕಿ ನಿಗಮದಲ್ಲಾದ ಬಹುಕೋಟಿ ಹಗರಣ ವಿಧಾನಸಭೆಯಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು. ವಿಪಕ್ಷಗಳು ಈ ಬಗ್ಗೆ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅಂಕೋಲಾದಲ್ಲಿ ಮಾತಾಡಿದ್ದು, 187ಕೋಟಿ ಹಣ ತೆಲಂಗಾಣಕ್ಕೆ ವರ್ಗಾವಣೆ ಆಗಿದೆ, ಈಗ 140 ಕೋಟಿ ಹಣ ವಾಪಾಸ್ ಬಂದಿದೆ ಅಂತ ಸಿಎಂ ಜನರ ಕಿವಿಗೆ ಹೂ ಮುಡುಸ್ತಿದ್ದಾರೆ. ಕದ್ದ ಹಣ ವಾಪಾಸ್ ಬಂದ್ರೆ ಬೆಲೆ ಇಲ್ಲ ಎಂದು ವಿಜಯೇಂದ್ರ ಲೇವಡಿ ಮಾಡಿದರು.
ಈಗಾಗಲೇ ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾರೆ. ನಮ್ಮ ಸರ್ಕಾರಕ್ಕೂ ಹಗರಣಕ್ಕೂ ಸಂಬಂಧ ಇಲ್ಲ ಅಂತ ಸಿಎಂ ಹೇಳ್ತಿದ್ದಾರೆ. ಈಗಾಗಲೇ ಧರಣಿಯಲ್ಲಿ, ಅಧಿವೇಶನದಲ್ಲಿ ಸಂಬಂಧ ಇದೇ ಅನ್ನೋದನ್ನ ನಾವು ತೋರಿಸಿದ್ದೇವೆ. ವಾಲ್ಮೀಕಿ ಹಗರಣದಲ್ಲಿ ನಮ್ಮ ಹೋರಾಟ ಮುಗಿದಿಲ್ಲಾ. ಸದನದಲ್ಲಿ ಬೇರೆ ವಿಷಯಗಳ ಚರ್ಚೆ ಆಗ್ಬೇಕಿದೆ ಹಾಗಾಗಿ ಹೋರಾಟಕ್ಕೆ ಬ್ರೇಕ್ ಕೊಟ್ಟಿದ್ದೇವೆ, ಮುಂದಿನ ದಿನಗಳಲ್ಲಿ ಬೃಹತ್ ಧರಣಿ ಮಾಡ್ತೀವಿ, ವಾಲ್ಮೀಕಿ ಹಗರಣ ಬಿಡಲ್ಲ, ಭ್ರಷ್ಟಾಚಾರದಲ್ಲಿ ಯಾರ್ಯಾರು ಭಾಗಿ ಆಗಿದರೋ ಎಲ್ಲಾರ ಹೆಸರು ಹೊರ ತರ್ತಿವಿ.ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಪಂಗಡಕ್ಕೆ ದ್ರೋಹ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಬಡವರು ಮನೆ ಕಳ್ಕೊಂಡಿದ್ದಾರೆ ಪರಿಹಾರಕ್ಕೆ ಒತ್ತಾಯ ಮಾಡ್ತಿವಿ, ಈ ಹಿಂದೆ ಯಡಿಯೂರಪ್ಪನವರು 5ಲಕ್ಷ ಹಣ ಘೋಷಣೆ ಮಾಡಿದ್ರು, ಮನೆ ಕಳ್ಕೊಂಡಿರೋವ್ರ್ಗೆ 5ಲಕ್ಷ, ಗೋಡೆ ಕುಸಿತಕ್ಕೆ 1ಲಕ್ಷ ರುಪಾಯಿ ಕೊಡ್ಬೇಕು ಎಂದು ಸದನದಲ್ಲಿ ಒತ್ತಾಯ ಮಾಡ್ತೀವಿ ಎಂದರು. ರಾಜ್ಯದಲ್ಲಿ ಡೆಂಗ್ಯೂ ಹೆಚ್ಚಾಗ್ತಿದೆ ರಾಜ್ಯ ಸರ್ಕಾರ ನಿರ್ಲಕ್ಷ ತೋರ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.