- ಮಗು ಕುಡಿಯುವ ಹಾಲಿಗೆ ಆಲ್ಕೋಹಾಲ್ ಬೆರಸಿದ ಅಜ್ಜಿ
- ಕೋಮಾ ಸ್ಥಿತಿಗೆ ತಲುಪಿದ 4 ತಿಂಗಳ ಮಗು
ರೋಮ್: ಇಟಲಿಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಮಗು ಕುಡಿಯುವ ಹಾಲಿಗೆ ಅಜ್ಜಿಯೊಬ್ಬರು ಮಿಸ್ ಆಗಿ ಆಲ್ಕೋಹಾಲ್ ಬೆರೆಸಿದ್ದಾರೆ. ಅರ್ಧ ಬಾಟಲಿ ಹಾಲು ಕುಡಿದ ಮಗು ಅಳಲು ಆರಂಭಿಸಿದೆ. ಈ ವೇಳೆ ಆತಂಕಕ್ಕೊಳಗಾದ ಅಜ್ಜಿ ಉಳಿದ ಹಾಲಿನ ವಾಸನೆ ನೋಡಿದಾಗ ಹಾಲಿನಲ್ಲಿ ಆಲ್ಕೋಹಾಲ್ ಮಿಶ್ರಣವಾಗಿರುವುದು ತಿಳಿದು ಬಂದಿದೆ.
ಇದರಿಂದ ಅಘಾತಕೊಳಗಾದ ವೃದ್ಧೆ ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯಿಂದ ಕೋಮಾ ಸ್ಥಿತಿಗೆ ತಲುಪಿದ್ದ ಮಗು ನಂತರ ಬೇತರಿಸಿಕೊಂಡಿದ್ದು, ಸದ್ಯ ಮಗು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಮಗುವಿಗೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಮಗುವಿನ ಸ್ಥಿತಿಯನ್ನು ಸಂಪೂರ್ಣವಾಗಿ ಪರಿಶೀಲಿಸಿದ ನಂತರ ಮಗುವಿನ ಅಜ್ಜಿ ವಿರುದ್ಧ ಪ್ರಕರಣ ದಾಖಲಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.