ರಾಜ್ಯದಲ್ಲಿ ಬೈ ಎಲೆಕ್ಷನ್ ಭರಾಟೆ ಜೋರಾಗಿಯೇ ನಡೆದಿದೆ. ತಮ್ಮ ಅಭ್ಯರ್ಥಿಯ ಗೆಲುವಿಗಾಗಿ ಉಭಯ ಪಕ್ಷಗಳು ಟೀಕಾ ಪ್ರಹಾರಗಳಲ್ಲಿ ಸೈ ಎನಿಸಿಕೊಂಡು ರಾಜಕೀಯ ಕೆಸರನ್ನ ಮೈ ಮೇಲೆ ಎಳೆದುಕೊಂಡಿದ್ದರು. ಆದರೆ ಚುನಾವಣಾ ಪ್ರಚಾರದಲ್ಲಿ ಜಮೀರ್ ವರ್ತನೆ ಆಕ್ರೋಶಕ್ಕೆ ಕಾರಣವಾಗಿದೆ. ಹೌದು.. ಚನ್ನಪಟ್ಟಣ ಬೈ ಎಲೆಕ್ಷನ್ ಪ್ರಚಾರದ ವೇಳೆ ಸಚಿವ ಜಮೀರ್ ರಿಂದ ಜನಾಂಗೀಯ ನಿಂದನೆ ಆಗಿದೆ.
ಕುಮಾರಸ್ವಾಮಿಯನ್ನ ‘ಕರಿಯ’ ಎಂದು ಜಮೀರ್ ನಿಂದಿಸಿದ್ದಾರೆ. ಬಹಿರಂಗ ಪ್ರಚಾರ ಸಭೆಯಲ್ಲಿ ಸಚಿವ ಜಮೀರ್ ಯಡವಟ್ಟು ಮಾಡಿಕೊಂಡಿದ್ದಾರೆ. ‘ಕಾಲಾ ಕುಮಾರಸ್ವಾಮಿ’ ಎಂದು ರಾಜ್ಯ ಸಚಿವ ಜಮೀರ್ ಅಹ್ಮದ್ ಟೀಕಿಸಿದ್ದಾರೆ.
ಸಚಿವ ಜಮೀರ್ ಅಹ್ಮದ್ ಹೇಳಿಕೆಗೆ ಜೆಡಿಎಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ರಾಜ್ಯದ ಮಂತ್ರಿಯಿಂದಲೇ ‘ಜನಾಂಗೀಯ ನಿಂದನೆ’, ‘ವರ್ಣಭೇದ’ ಅನುಸರಣೆ ಎಷ್ಟು ಸರಿ.? ಒಂದು ಸಮಾಜವನ್ನ ಜಮೀರ್ ಅಹ್ಮದ್ ಎತ್ತಿಕಟ್ಟುತ್ತಿದ್ದಾರೆ.! ಸಮುದಾಯವನ್ನ ಎತ್ತಿಕಟ್ಟಿ ಶಾಂತಿ ಕೆಡಿಸುತ್ತಿದ್ದಾರೆ. ಜಮೀರ್ ಅವರ ಹೇಳಿಕೆ, ನಡೆ ಅಕ್ಷಮ್ಯ ಅಪರಾಧ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ಹಾಗೂ ಜಮೀರ್ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಜೆಡಿಎಸ್ ಆಗ್ರಹಿಸಿದೆ.
ಇದನ್ನೂ ಓದಿ: ನನ್ನನ್ನು ಇನ್ಮುಂದೆ ಈ ರೀತಿ ಕರೀಬೇಡಿ: ಕಮಲ್ ಹಾಸನ್!