ಶ್ರೀನಗರ: ಆರ್ಟಿಕಲ್ 370 ರದ್ದಾದ ಬಳಿಕ ಇದೇ ಮೊದಲ ಬಾರಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ನೇತೃತ್ವದ ಮೈತ್ರಿಕೂಟ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ.
ಆಜ್ ತಕ್ ಸಿ ವೋಟರ್ ಸಮೀಕ್ಷೆಯೊಂದರಲ್ಲಿ ಮಾತ್ರವೇ ಬಿಜೆಪಿಗೆ ಮುನ್ನಡೆ ಬಂದಿದ್ದು, ಉಳಿದೆಲ್ಲ ಸಮೀಕ್ಷೆಗಳು ಕಾಂಗ್ರೆಸ್-ಎನ್ಸಿ ಮೈತ್ರಿ ಕೂಟಕ್ಕೆ ಅಧಿಕಾರ ಎಂಬುದನ್ನು ತೋರಿಸಿವೆ.
ಪ್ರತ್ಯೇಕ ರಾಜ್ಯ ಸ್ಥಾನಮಾನ ರದ್ದಾದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ 90 ವಿಧಾನಸಭಾ ಕ್ಷೇತ್ರಗಳಿಗೆ ಮೂರು ಹಂತಗಳಲ್ಲಿ ಮತದಾನ ನಡೆದಿತ್ತು. ಸೆಪ್ಟೆಂಬರ್ 18, ಸೆಪ್ಟೆಂಬರ್ 25 ಮತ್ತು ಅಕ್ಟೋಬರ್ 1 ಮೂರು ಹಂತಗಳಲ್ಲಿ ಮತದಾನ ನಡೆದಿತ್ತು. ಇದೇ ಅಕ್ಟೋಬರ್ 8ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಯಾವ ಸಮೀಕ್ಷೆ ಏನು ಹೇಳುತ್ತೆ?
ಸಿ ವೋಟರ್ – ಆಜ್ ತಕ್
ಕಾಂಗ್ರೆಸ್ + ಎನ್ಸಿ – 11-15
ಬಿಜೆಪಿ – 27-31
ಪಿಡಿಪಿ – 02
ಇತರೆ – 01
ದೈನಿಕ್ ಬಾಸ್ಕರ್
ಕಾಂಗ್ರೆಸ್ + ಎನ್ಸಿ – 35-40
ಬಿಜೆಪಿ – 20-25
ಪಿಡಿಪಿ – 4-7
ಇತರೆ – 12-16
ಪೀಪಲ್ ಪ್ಲಸ್
ಕಾಂಗ್ರೆಸ್ + ಎನ್ಸಿ – 40-48
ಬಿಜೆಪಿ – 27-32
ಪಿಡಿಪಿ – 7-11
ಇತರೆ – 4-6
ಇಂಡಿಯಾ ಟುಡೆ- ಸಿ ವೋಟರ್
ಕಾಂಗ್ರೆಸ್ + ಎನ್ಸಿ – 40-48
ಬಿಜೆಪಿ – 27-32
ಪಿಡಿಪಿ – 6-12
ಇತರೆ – 6-11