- ಜಮ್ಮು – ಕಾಶ್ಮೀರದ ಎಲ್ಲಾ ಶಾಲೆಗಳಲ್ಲಿ ರಾಷ್ಟ್ರಗೀತೆ ಹಾಡುವುದು ಕಡ್ಡಾಯ
- ಕೇಂದ್ರಾಡಳಿತ ಪ್ರದೇಶದ ಎಲ್ಲಾ ಶಾಲೆಗಳಿಗೆ ನೋಟಿಸ್ ಹೊರಡಿಸಿರುವ ಶಿಕ್ಷಣ ಇಲಾಖೆ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಎಲ್ಲಾ ಶಾಲೆಗಳಲ್ಲಿ ಇನ್ನೂ ಮುಂದೆ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಲಾಗಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಕೇಂದ್ರಾಡಳಿತ ಪ್ರದೇಶದ ಎಲ್ಲಾ ಶಾಲೆಗಳಿಗೆ ನೋಟಿಸ್ ಹೊರಡಿಸಿರುವ ಶಿಕ್ಷಣ ಇಲಾಖೆ, ರಾಷ್ಟ್ರಗೀತೆಯೊಂದಿಗೆ ಬೆಳಗಿನ ತರಗತಿ ಪ್ರಾರಂಭಿಸುವಂತೆ ಕಟ್ಟಪ್ಪಣೆ ಮಾಡಿದೆ. ಇದರ ಜೊತೆಗೆ ಶಾಲಾ ಯೂನಿಫಾರ್ಮ್ವನ್ನು ಕೂಡಾ ಕಡ್ಡಾಯಗೊಳಿಸಿದೆ. ಬೆಳಗಿನ ಟೈಮ್ ಅಲ್ಲಿ ಶಾಲಾ ಸಮವಸ್ತ್ರದೊಂದಿಗೆ ಸಾಲಾಗಿ ನಿಂತು ರಾಷ್ಟ್ರಗೀತೆ ಹಾಡುವದರಿಂದ ಏಕತೆಯ ಜೊತೆಗೆ ಶಿಸ್ತಿನ ಭಾವನೆ ಮೂಡಲಿದೆ ಎಂದು ತಿಳಿಸಿದೆ.
ರಾಷ್ಟ್ರಗೀತೆ ಹಾಡುವುದು ಮತ್ತು ಶಾಲೆಗಳಲ್ಲಿ ಸಾಮೂಹಿಕ ಸಭೆ ಸೇರುವುದು ಮಕ್ಕಳಲ್ಲಿ ನೈತಿಕ ಮೌಲ್ಯ ಹೆಚ್ಚಿಸುವ ಜೊತೆಗೆ ಮಾನಸಿಕ ನೆಮ್ಮದಿಯನ್ನು ಘೋಷಿಸಿಸುವ ವೇದಿಕೆಗಳಾಗಿ ಕಾರ್ಯ ನಿರ್ವಹಿಸಲಿವೆ. ಆದರೂ ಇಂತಹ ಮಹತ್ವದ ಆಚರಣೆಗಳು ಜಮ್ಮು ಮತ್ತು ಕಾಶ್ಮೀರದ ವಿವಿಧ ಶಾಲೆಗಳಿಗೆ ನಿರ್ದೇಶನ ನೀಡಿದೆ.
ಶಾಲೆಗಳಿಗೆ ಗೆಸ್ಟ್ಗಳನ್ನು ಆಹ್ವಾನಿಸಿ ಮಕ್ಕಳಿಗೆ ಪರಿಸರ ಜಾಗೃತಿ, ಮಾದಕ ದ್ರವ್ಯ ವ್ಯಸನದಿಂದ ದೂರ ಉಳಿಯುವಂತೆ ಜಾಗೃತಿ ಮೂಡಿಸಬಬೇಕೆಂದು ಶಿಕ್ಷಣ ಇಲಾಖೆ ಹೊರಡಿಸಿದ ನೋಟಿಸ್ನಲ್ಲಿ ತಿಳಿಸಲಾಗಿದೆ.