ಬ್ರೇಕ್ ಫೇಲ್ಯೂರ್ ಆದ ಪರಿಣಾಮ ಚಲಿಸುತ್ತಿದ್ದ ಬಸ್ನಿಂದ ಪ್ರಯಾಣಿಕರು ಜಿಗಿದು ಪಾರಾಗಿರುವ ಘಟನೆ ಜಮ್ಮುವಿನ ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಬನಿಹಾಲ್ ಬಳಿ ನಡೆದಿದೆ. ಅಮರನಾಥ ಯಾತ್ರೆಯಿಂದ 45 ಮಂದಿ ಯಾತ್ರಿಕರು ವಾಪಾಸಾಗುತ್ತಿದ್ದಾಗ ಇದ್ದಕ್ಕಿದಂತೆ ಬಸ್ನ ಬ್ರೇಕ್ ಫೇಲ್ ಆಗಿದೆ. ಬಸ್ನಲ್ಲಿ 17 ಮಹಿಳೆಯರು ಮತ್ತು 1 ಮಗು ಸೇರಿದಂತೆ ಒಟ್ಟು 45 ಜನ ಪ್ರಯಾಣಿಕರಿದ್ದರು.
ಈ ವೇಳೆ ಬಸ್ ಡ್ರೈವರ್ ಚಾಣಾಕ್ಷತೆಯಿಂದ ಇಳಿಜಾರಿನಲ್ಲಿ ಬಸ್ಸನ್ನು ನಿಧಾನವಾಗಿ ಚಲಾಯಿಸಿದ್ದಾರೆ. ಬಸ್ ನಿಧಾನವಾಗಿ ಚಲಿಸುತ್ತಿದ್ದಾಗ ಪ್ರಯಾಣಿಕರು ಹಿಂದಿನ ಡೋರ್ನಿಂದ ಒಬ್ಬೊಬ್ಬರಾಗಿ ಜಿಗಿದಿದ್ದಾರೆ. ಚಾಲಕನ ಸಮಯಪ್ರಜ್ಞೆ ಹಾಗೂ ಸ್ಥಳದಲ್ಲಿದ್ದ ಸೈನಿಕರ ಸಹಾಯದಿಂದ ಯಾವುದೇ ಪ್ರಾಣಾಪಾಯವಿಲ್ಲದೆ ಬಸ್ನಲ್ಲಿದ್ದ ಎಲ್ಲರೂ ಪಾರಾಗಿದ್ದಾರೆ. ಆರು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.