ಶ್ರೀನಗರದ ಜಮ್ಮು ಕಾಶ್ಮೀರದಲ್ಲಿ ಪ್ರವಾಸಕ್ಕೆ ತೆರಳಿದ್ದ ಒಂದೇ ಕುಟುಂಬದ ಮೂವರು ಕಾರು ಅಪಘಾತವೊಂದರಲ್ಲಿ ಮೃತಪಟ್ಟಿದ್ದಾರೆ. ಅಮರನಾಥ ಯಾತ್ರಾ ಹಾದಿ ಸಮೀಪದ ಝೋಜಿಲಾ ಪಾಸ್ ಬಳಿ ದುರಂತ ಘಟನೆ ನಡೆದಿದೆ. ಚಾಲಕ ಹ್ಯಾಂಡ್ಬ್ರೇಕ್ ಹಾಕಲು ಮರೆತದ್ದೇ ದುರ್ಘಟನೆಗೆ ಕಾರಣವಾಗಿದೆ. ಬೆಂಗಳೂರು ನಿವಾಸಿಗಳಾದ ತಂದ್ರಾ ದಾಸ್ ಮೊನಾಲಿಸಾ ದಾಸ್ ಹಾಗೂ ಮತ್ತೊಬ್ಬ ಪುರುಷ ಸಾವಿಗೀಡಾಗಿದ್ದಾರೆ. ಬಾಲಕಿ ಅದ್ರಿತಾ ಖಾನ್ ಎಂಬಾಕೆಗೆ ಗಾಯಗಳಾಗಿವೆ.
ಬೆಳ್ಳಂದೂರಿನ ಗ್ರೀನ್ ಗ್ಲೆನ್ ಲೇಔಟ್ ನಿವಾಸಿಗಳಾಗಿದ್ದರು. ಜಮ್ಮು ಕಾಶ್ಮೀರಕ್ಕೆ ಪ್ರವಾಸಕ್ಕೆ ಹೋಗಿದ್ದ ಕುಟುಂಬ ಅಲ್ಲಿನ ಬಾಡಿಗೆ ಕಾರಿನಲ್ಲಿ ಪ್ರಯಾಣ ಮಾಡುತ್ತಿತ್ತು. ಹಾದಿಯಲ್ಲಿ ಎದುರಿದ್ದ ಕಾರೊಂದು ಕೆಟ್ಟು ನಿಂತಿದ್ದು, ಅದೇನೆಂದು ನೋಡಲು ಈ ಕಾರು ಚಾಲಕ ಇಳಿದಿದ್ದ. ಇಳಿಯುವಾಗ ಕಾರಿನ ಹ್ಯಾಂಡ್ ಬ್ರೇಕ್ ಹಾಕಿರಲಿಲ್ಲ. ಹೀಗಾಗಿ ಜಾರಿ ಹೋದ ಕಾರು ಪ್ರಪಾತಕ್ಕೆ ಉರುಳಿದೆ. ಮೃತದೇಹಗಳನ್ನು ಸಿಆರ್ಪಿಎಫ್ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಹೊರತೆಗೆದಿದ್ದಾರೆ