ಬಾಲಿವುಡ್ ನ ಖ್ಯಾತ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಅವರು “ಮಿಸ್ಟರ್ & ಮಿಸೆಸ್ ಮಹಿ” ಎಂಬ ಸಿನಿಮಾವನ್ನು ಎಮ್ ಎಸ್ ಧೋನಿಗೆ ಸಿನಿಮಾ ತೋರಿಸಬೇಕೆಂಬ ಆಸೆಯನ್ನು ಹಂಚಿಕೊಂಡಿದ್ದಾರೆ.
ಚಿತ್ರದ ಹೊಸ ಹಾಡಿನ “ದೇಖಾ ತೇನು” ಬಿಡುಗಡೆ ಸಮಾರಂಭದಲ್ಲಿ ನಟಿ ಜಾಹ್ನವಿ, ನಟ ರಾಜ್ಕುಮಾರ್ ರಾವ್ ಅವರೊಂದಿಗೆ ಧೋನಿಗೆ ಸಿನಿಮಾವನ್ನು ತೋರಿಸಲು ಆಶೀಸಿದ್ರಂತೆ. ಆದರೆ ಅವರು ತುಂಬಾ ಬ್ಯುಸಿಯಾಗಿದ್ದಾರೆ ಅಂತ ಹೇಳಿದ್ದಾರೆ.
ಮಾಧ್ಯಮಗಳಿಗೆ ಜಾಹ್ನವಿ ಎಮ್ ಎಸ್ ಧೋನಿ ಹಾಗೂ ಸಾಕ್ಷಿಗೆ ಈ ಚಿತ್ರ ತೋರಿಸಲು ದಯವಿಟ್ಟು ಸಹಾಯ ಮಾಡಿ ಎಂದು ಒತ್ತಾಯಿಸಿದರು. ಜಾಹ್ನವಿ ಕಪೂರ್ ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಧೋನಿ ಅವರನ್ನ ಭೇಟಿಯಾಗಿದ್ದರು. ಅವರು ಸಾಮಾನ್ಯ ವ್ಯಕ್ತಿ ಅಲ್ಲ. ಯಾರೇ ಬಂದು ಧೋನಿಗೆ ಫೋಟೋ ಕೇಳಿದರು ಅವರ ಜತೆ ಸೆಲ್ಫಿ ತೆಗೆದುಕೊಂಡು ಗೌರವಯುತವಾಗಿ ಮಾತುಕತೆ ನಡೆಸುತ್ತಿದ್ದರು ಎಂದು ಜಾಹ್ನವಿ ಕಪೂರ್ ಹೇಳಿದ್ದಾರೆ.