ವಿಶ್ವದ ಪ್ರಸಿದ್ಧ ಕಾರ್ಟೂನ್ಗಳಲ್ಲಿ ಡೋರೆಮಾನ್ ಕೂಡ ಒಂದು. ಇಂದಿಗೂ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಡೋರೆಮಾನ್ ಶೋ ನೋಡ್ತಾರೆ. ಆದ್ರೆ ಇದೀಗ ಡೋರೆಮನ್ ಪಾತ್ರವು ತನ್ನ ಧ್ವನಿಯನ್ನು ಕಳೆದುಕೊಂಡಿದೆ. ಡೋರೇಮನ್ ಪಾತ್ರಕ್ಕೆ ಧ್ವನಿ ನೀಡಿದ ಖ್ಯಾತ ನಟಿ ನೊಬುಯೊ ಒಯಾಮಾ ನಿಧನರಾಗಿದ್ದಾರೆ. ನಟಿ ಕೆಲವು ವರ್ಷಗಳ ಹಿಂದೆ ಕ್ಯಾನ್ಸರ್ ಅನ್ನು ಜಯಿಸಿದ್ದರು. ಆದ್ರೆ ಇದೀಗ ಕೊನೆಯುಸಿರೆಳೆದಿದ್ದಾರೆ.
1979 ರಲ್ಲಿ ಕಾರ್ಟೂನ್ ಶೋ ‘ಡೋರೆಮನ್’ ಪ್ರಾರಂಭವಾಯಿತು. ನೊಬುಯೊ ಒಯಾಮಾ 1979 ರಿಂದ 2005 ರವರೆಗೆ ನಟಿ ನೊಬುಯೊ ಒಯಾಮಾ ಡೋರೇಮನ್ಗೆ ಧ್ವನಿ ನೀಡಿದ್ದಾರೆ. ಆಕೆಯ ಧ್ವನಿಯು ಜಪಾನ್ನಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಮಕ್ಕಳಿಗೆ ಇಷ್ಟವಾಯಿತು. ಓಯಾಮಾ ವೃದ್ಧಾಪ್ಯದಿಂದ ನಿಧನರಾದರು. ಆಕೆಯ ನಿಧನಕ್ಕೆ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
ಸೆಪ್ಟೆಂಬರ್ 29 ರಂದು ನೊಬುಯೊ ಒಯಾಮಾ ವೃದ್ಧಾಪ್ಯದಿಂದ ನಿಧನರಾದರು ಎಂದು ಜಪಾನ್ ಮಾಧ್ಯಮಗಳು ವರದಿ ಮಾಡಿವೆ. ಒಯಾಮಾ ಅವರ ಅಂತ್ಯಕ್ರಿಯೆ ಕೂಡ ನಡೆದಿದ್ದು, ಸಂಬಂಧಿಕರು ವಿಧಿವಿಧಾನ ನೆರವೇರಿಸಿದ್ರು.
ನೊಬುಯೊ ಒಯಾಮಾ 1933 ರಲ್ಲಿ ಟೋಕಿಯೊದಲ್ಲಿ ಜನಿಸಿದರು. ಅವರು 1957 ರಿಂದ ಧ್ವನಿ ಕಲಾವಿದರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ರು. ಅವರು ಲಸ್ಸಿ ಎಂಬ ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ನಂತರ ಅವರು 1965 ಮತ್ತು 1966 ರ ನಡುವೆ ಪ್ರಸಾರವಾದ ಹಸ್ಲ್ ಪಂಚ್ಗೆ ತಮ್ಮ ಧ್ವನಿಯನ ನೀಡಿದರು. ನಂತರ ಅವರು ಇನ್ವಿನ್ಸಿಬಲ್ ಸೂಪರ್ಮ್ಯಾನ್ ಜಾಂಬೊ 3 ರಲ್ಲಿ ಕ್ಯಾಪಿ ಜಿನ್ ಪಾತ್ರಕ್ಕೆ ಧ್ವನಿ ನೀಡಿದ್ರು.
2001 ರಲ್ಲಿ, ಒಯಾಮಾ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಅನಾರೋಗ್ಯದ ಕಾರಣ ಅವರು ಕೆಲಸದಿಂದ ನಿವೃತ್ತರಾದರು. 2005 ರಲ್ಲಿ, ಒಯಾಮಾ ಡೋರೇಮನ್ಗೆ ಧ್ವನಿ ನೀಡುವುದರಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ರು. ನಂತರ 2010 ರಲ್ಲಿ ಅವರು ಹಿಟ್ ವೀಡಿಯೋ ಗೇಮ್ ಸರಣಿ ಡಂಗನ್ರೋನ್ಪಾ ಮೂಲಕ ರೀ ಎಂಟ್ರಿ ಕೊಟ್ಟಿದ್ರು. ಡಂಗನ್ರೊನ್ಪಾದಲ್ಲಿ ಮೊನೊಕುಮಾಗೆ ಧ್ವನಿ ನೀಡಿದ್ದಾರೆ.