‘ಜಪಾನ್ನಲ್ಲಿ 24 ಗಂಟೆಗಳ ಭಾರತೀಯ ಆಹಾರ ಚಾಲೆಂಜ್’ಗಾಗಿ ಜಪಾನ್ನ ಇನ್ಫ್ಲುಯೆನ್ಸರ್ ಕೋಕಿ ಶಿಶಿಡೊ ಜಪಾನ್ನಲ್ಲಿರುವ ಭಾರತೀಯ ತಿಂಡಿಯ ರೆಸ್ಟೋರೆಂಟ್ಗೆ ಭೇಟಿ ನೀಡಿದ್ದರು. ಅವರು ಉಪಾಹಾರ ಗೃಹಕ್ಕೆ ಭೇಟಿ ನೀಡಿದಾಗ, ಜನರು ಆ ವೀಡಿಯೊದಲ್ಲಿ ಏನೋ ಸರಿಯಿಲ್ಲ ಎಂದು ಗುರುತಿಸಿದ್ದಾರೆ. ಜನರ ಗಮನವನ್ನು ಸೆಳೆದದ್ದು ಆಹಾರ ಅಥವಾ ಸಿಬ್ಬಂದಿ ನಡವಳಿಕೆಯಲ್ಲ. ಅದರ ಬದಲು ಅಲ್ಲಿನ ಭಾರತೀಯ ತ್ರಿವರ್ಣ ಧ್ವಜ ಅವರ ಗಮನ ಸೆಳೆದಿದೆ. ಏಕೆಂದರೆ, ಆ ಬಾವುಟವನ್ನು ಉಲ್ಟಾ ಹಾರಿಸಲಾಗಿತ್ತು.
ಜಪಾನ್ನಲ್ಲಿರುವ ಭಾರತೀಯ ರೆಸ್ಟೋರೆಂಟ್ನಲ್ಲಿ ತ್ರಿವರ್ಣ ಧ್ವಜವನ್ನು ತಲೆಕೆಳಗಾಗಿ ಹಾರಿಸುತ್ತಿರುವುದನ್ನು ವೀಡಿಯೊದಲ್ಲಿ ನೆಟ್ಟಿಗರು ಗುರುತಿಸಿದ್ದಾರೆ. ಈ ವಿಡಿಯೋವನ್ನು ನೋಡಿದವರು ಬಾವುಟವನ್ನು ಸರಿಯಾಗಿ ಹಾರಿಸುವಂತೆ ಕಾಮೆಂಟ್ಗಳನ್ನು ಮಾಡಿದ ನಂತರ ಆ ಧ್ವಜವನ್ನು ಸರಿಪಡಿಸಲಾಗಿದೆ.