ನಂದು ಮತ್ತು ಜಶ್ವಂತ್, ರೋಡಿಸ್ ಶೋ ಮೂಲಕ ಖ್ಯಾತಿ ಗಳಿಸಿದ್ದರು. ಮತ್ತು ಕನ್ನಡ ಬಿಗ್ ಬಾಸ್ ಓಟಿಟಿ ಸೀಸನ್ 1 ಗೆ ಈ ಜೋಡಿಗಳಾಗಿ ಆಗಮಿಸಿದ್ದರು. ಅವರ ಪ್ರೀತಿಯು ಕೂಡ ಬಿಗ್ ಬಾಸ್ ಮನೆಯಲ್ಲಿ ಸ್ವಲ್ಪ ದಿನಗಳ ಕಾಲ ಸಾಗಿತ್ತು.ಆದರೆ ಬಿಗ್ ಬಾಸ್ ಮನೆಯಿಂದ ಹೊರ ಬಂದ ತಕ್ಷಣ ಇಬ್ಬರ ನಡುವಿನ ಮನಸ್ತಾಪದಿಂದಾಗಿ ಬ್ರೇಕ್ ಅಪ್ ಮಾಡಿಕೊಂಡಿದ್ದರು. ನಂತರ, ಜಶ್ವಂತ್ ಖಾಸಗೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ರಿಯಾಲಿಟಿ ಶೋ 15ನೇ ಸೀಸನ್ ನಲ್ಲಿ ಭಾಗಿಯಾಗಿದ್ದರು. ಈ ವೇಳೆ ಇವರ ಪಾರ್ಟನರ್ ಆಗಿ ಆಕೃತಿ ನೇಗಿ ಇದ್ದರು. ಈ ವೇಳೆ ಇಬ್ಬರು ನಡುವೆ ಪ್ರೀತಿ ಶುರುವಾಗಿದೆ. ಇಬ್ಬರು ರಿಯಾಲಿಟಿ ಶೋ 15ನೇ ಸೀಸನ್ ವಿನ್ನರ್ ಆಗಿದ್ದರು. ಇದಾದ ಬಳಿಕ ಜಶ್ವಂತ್ ಹಾಗೂ ಆಕೃತಿ ನೇಗಿ ಪೈಕಿ ಸ್ಪ್ಲಿಟ್ಸ್ವಿಲ್ಲಾ ಶೋ ಮೂಲಕವೇ ಸಖತ್ ಫೇಮಸ್ ಆಗಿದ್ದರು. ಇಬ್ಬರು ಬಹಳ ಆತ್ಮೀಯವಾಗಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಇಬ್ಬರ ಫೋಟೋಗಳು ಹಾಗೂ ರೀಲ್ಸ್ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಾಕಷ್ಟು ಮಂದಿ ಈ ಇಬ್ಬರ ರೋಮ್ಯಾಂಟಿಕ್ ವಿಡಿಯೋ ಹಾಗೂ ಫೋಟೋಸ್ ನೋಡಿ ಪಕ್ಕಾ ಪ್ರೀತಿಯಲ್ಲಿದ್ದಾರೆ ಅಂತ ಅಂದುಕೊಂಡಿದ್ದರು. ಅದರಂತೆ ಈ ಇಬ್ಬರು ಕೂಡ ಪ್ರೀತಿಯಲ್ಲಿ ಇರೋ ಹಾಗೇ ಇದ್ದರು. ಹೀಗಾಗಿ ಈ ಇಬ್ಬರು ಜೋಡಿಯ ಹೆಸರಲ್ಲಿ ಸಾಕಷ್ಟು ಫ್ಯಾನ್ ಪೇಜ್ಗಳು ಕ್ರಿಯೇಟ್ ಆಗಿವೆ.
ಆದರೆ ಇದೀಗ ಈ ಇಬ್ಬರ ಮಧ್ಯೆ ಬ್ರೇಕ್ ಆಗಿದೆ ಎಂಬ ಮಾತುಗಳು ಕೇಳು ಬರುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಈ ಇಬ್ಬರು ಒಬ್ಬರಿಗೊಬ್ಬರು ಅನ್ ಫಾಲೋ ಮಾಡಿಕೊಂಡಿದ್ದಾರೆ. ಜೊತೆಗೆ ಕೆಲವೊಂದು ಇಬ್ಬರು ರೀಲ್ಸ್ ಮಾಡಿದ ವಿಡಿಯೋ ಡಿಲೀಟ್ ಮಾಡಿಕೊಂಡಿದ್ದಾರೆ. ಇನ್ನೂ, ಇದನ್ನೇ ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ನೀವು ಏಕೆ ಬ್ರೇಕ್ ಅಪ್ ಮಾಡಿಕೊಂಡಿದ್ದೀರಿ, ಪ್ಲಿಸ್ ಹೀಗೆ ಮಾಡಬೇಡಿ ನನಗೆ ಇಷ್ಟ ಆಗಿರೋ ಜೋಡಿ ನೀವು ಅಂತ ಕಾಮೆಂಟ್ಸ್ ಹಾಕಿದ್ದಾರೆ. ಇನ್ನೂ ಈ ಬಗ್ಗೆ ಜಶ್ವಂತ್ ಹಾಗೂ ಆಕೃತಿ ನೇಗಿ ಸ್ಪಷ್ಟವಾಗಿಯಾವುದೇ ಪ್ರತಿಕ್ರಿಯೆ ನೀಡಿಲ್ಲ̤