ಗಾಬಾ ಮೈದಾನದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಉತ್ತಮ ಆಟ ಆಡಿದೆ. ಟಾಸ್ ಸೋತರು ಮೊದಲು ಬ್ಯಾಟಿಂಗ್ ಸಿಕ್ಕಿದೆ. ಆಸ್ಟ್ರೇಲಿಯಾ ಪರ ಟ್ರಾವಿಸ್ ಹೆಡ್ ಹಾಗೂ ಸ್ಟೀವ್ ಸ್ಮಿತ್ ಸೆಂಚುರಿ ಭಾರಿಸಿದ್ದಾರೆ. ಅದಕ್ಕೆ ಕೌಂಟರ್ ಆಗಿ ಟೀಮ್ ಇಂಡಿಯಾ ಪರ ಜಸ್ಪ್ರೀತ್ ಬುಮ್ರಾ 5 ವಿಕೆಟ್ ತೆಗೆದು ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಸ್ಪೋಟಕ ದಾಳಿ ನಡೆಸಿದ್ದಾರೆ. ಆಸ್ಟ್ರೇಲಿಯಾ ಬ್ಯಾಟರ್ಗಳ ಅಬ್ಬರದ ನಡುವೆ ಮಿಂಚಿನ ದಾಳಿ ನಡೆಸಿದ ಬುಮ್ರಾ 5 ವಿಕೆಟ್ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ದ್ವಿತೀಯ ದಿನದಾಟದ ಆರಂಭದಲ್ಲೇ ಉಸ್ಮಾನ್ ಖ್ವಾಜಾ (21) ವಿಕೆಟ್ ಪಡೆದು ಅಲ್ಲಿಮದ ಆರಂಭ ಮಾಡಿದರು ಬುಮ್ರಾ, ಆ ಬಳಿಕ ನಾಥನ್ ಮೆಕ್ಸ್ವೀನಿ (9) ವಿಕೆಟ್ ಪಡೆದರು. ಇದಾದ ಬಳಿಕ ಸ್ವೀವ್ ಸ್ಮಿತ್ (101) ವಿಕೆಟ್ ತೆಗೆಯುವಲ್ಲಿ ಯಶಸ್ವಿಯಾದರು. ಆ ಬಳಿಕ ಬಂದ ಮಿಚೆಲ್ ಮಾರ್ಷ್ 5 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಟ್ರಾವಿಸ್ ಹೆಡ್ (152) ಕೂಡ ಬುಮ್ರಾಗೆ ವಿಕೆಟ್ ಕೊಟ್ಟು ನಡೆದರು.
ಈ 5 ವಿಕೆಟ್ ಪಡೆದು ವಿದೇಶಿ ಟೆಸ್ಟ್ನಲ್ಲಿ ಟೀಂ ಇಂಡಿಯಾ ಪರ ಅಧಿಕ ಬಾರಿ 5 ವಿಕೆಟ್ ತೆಗೆದ ಆಭರತದ ವೇಗಿ ಎಂಬ ದಾಖಲೆಯನ್ನ ಜಸ್ಪ್ರೀತ್ ಬುಮ್ರಾ ಬರೆದಿದ್ದಾರೆ. ಕಪಿಲ್ ದೇವ್ ಹೆಸರಿನಲ್ಲಿ ಈ ಮೊದಲು ಈ ದಾಖಲೆ ಇತ್ತು. ಇದೀಗ ಆ ದಾಖಲೆಯನ್ನು ಬುಮ್ರಾ ಮುರಿದಿದ್ದಾರೆ.