ಸಾರ್ವಜನಿಕರಿಗೆ ಆರೋಗ್ಯ ಇಲಾಖೆ ಗುಡ್ನ್ಯೂಸ್ ಕೊಟ್ಟಿದೆ. ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆ ಬಳಿ ಇರುವ ಜಯದೇವ ಆಸ್ಪತ್ರೆ 24 ಗಂಟೆಗಳ ಓಪನ್ ಇರಲಿದೆ. ಸಂಜೆ 4 ಗಂಟೆಗೆ ಕ್ಲೋಸ್ ಆಗುತ್ತಿತ್ತು. ಸಿಎಂ ಸೂಚನೆ ಮೇರೆಗೆ 24 ಗಂಟೆ ತೆರೆಯಲಿದೆ. ಅಂಜಿಯೋಗ್ರಾಂ, ಅಂಜಿಯೋಪ್ಲಾಸ್ಟಿ ಚಿಕಿತ್ಸೆಗೆ 24 ಗಂಟೆ ಸಿಗಲಿದೆ. ಜಯದೇವ ಆಸ್ಪತ್ರೆ ಓಪನ್ ಆಗಿ ಸಾರ್ವಜನಿಕರಿಗೆ ತುಂಬಾ ಅನುಕೂಲ ಆಗುತ್ತಿದೆ. ಆದರೆ ಸಂಜೆ ನಾಲ್ಕು ಗಂಟೆಗೆ ಕ್ಲೋಸ್ ಆಗಿ, ಹೃದಯ ಸಂಬಂಧಿ ಖಾಯಿಲೆಗಳಿಗೆ ಚಿಕಿತ್ಸೆ ಸಿಗುತ್ತರಲಿಲ್ಲ. ಕಳೆದ ಮೂರು ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ ಅವರು 24 ಗಂಟೆ ಓಪನ್ಗೆ ಸೂಚಿಸಿದ್ದರು. ಹೀಗಾಗಿ ಇಂದಿನಿಂದ 24 ಗಂಟೆ ಜಯದೇವ ಆಸ್ಪತ್ರೆ ಓಪನ್ ಇರಲಿದೆ.
ಅಂಜಿಯೋಗ್ರಾಮ್, ಅಂಜಿಯೋಪ್ಲಾಸ್ಟಿ ಸೇರಿದಂತೆ ಹಲವು ಹೃದಯ ಸಂಬಂಧಿ ಖಾಯಿಲೆಗಳಿಗೆ ಚಿಕಿತ್ಸೆ ಸಿಗಲಿದೆ. ಈ ಹಿಂದೆ ಸಾರ್ವಜನಿಕರು ಸಂಜೆ ವೇಳೆಗೆ ಬಂದರೆ ಚಿಕಿತ್ಸೆ ಸಿಗುತ್ತಿರಲಿಲ್ಲ. ಈಗ ಸಂಜೆವರೆಗೂ ಓಪನ್ ಮಾಡೋದಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೂಡ ಸೂಚಿಸಿದ್ದು, ಸಾರ್ವಜನಿಕರು 24 ಗಂಟೆಗಳ ಕಾಲ ಮಲ್ಲೇಶ್ವರಂ ಬಳಿ ಇರುವ ಜಯದೇವ ಆಸ್ಪತ್ರೆ ಓಪನ್ ಇರಲಿದೆ. ಎಮರ್ಜೆನ್ಸಿ ಕೇಸ್, ಓಪಿಡಿ ಜೊತೆಗೆ ಸುಸಜ್ಜಿತ ವಾರ್ಡ್ ವ್ಯವಸ್ಥೆ ಇರುವ ಆಸ್ಪತ್ರೆ ಇದಾಗಿದೆ. ರಾಜಾಜಿನಗರ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ತುಮಕೂರು, ನೆಲಮಂಗಲ ಹಾಗೂ ಇತರೆ ಜಿಲ್ಲೆಗಳಿಗೆ ತುಂಬಾ ಸನಿಹ ಆಗುವ ಈ ಆಸ್ಪತ್ರೆ 24 ಗಂಟೆ ತೆರೆಯುವುದರಿಂದ ತುಂಬಾ ಅನುಕೂಲಕತೆ ಆಗಲಿದ್ದು, ಸಾರ್ವಜನಿಕರು ಸೇವೆಯನ್ನ ಪಡೆಯಬಹುದಾಗಿದೆ.