ರಾಜ್ಯದಲ್ಲಿ ರಾಜಕೀಯ ಬಣ ಬಡಿದಾಟ ಪಕ್ಷದಿಂದ ಪಕ್ಷಕ್ಕೆ ಹೆಚ್ಚಾಗುತ್ತಿದೆ. ಈ ಮೊದಲು ಬಿಜೆಪಿ ಯ ರೆಬಲ್ ನಾಯಕರ ಕಿತ್ತಾಟ ದೆಹಲಿ ಅಂಗಳ ತಲುಪಿತ್ತು. ಆದರೂ ಸಹ ಪ್ರಯೋಜನವೇನೂ ಆಗಿಲ್ಲ. ಇದೀಗ ಬಿಜೆಪಿ ಯ ಮಿತ್ರ ಪಕ್ಷ ರಾಜ್ಯದ ಪ್ರದೇಶಿಕ ಪಕ್ಷ ಜೆಡಿಎಸ್ ಸರದಿ. ಹೌದು .. ಚನ್ನಪಟ್ಟಣ ಸೋಲಿನ ಬಳಿಕ ಜೆಡಿಎಸ್ ನಲ್ಲಿ ಬಣ ಬಡಿದಾಟ ಶುರುವಾಗಿದೆ. ಬಣ ರಾಜಕೀಯಕ್ಕೆ ಕುಮಾರಸ್ವಾಮಿಯವರ ಸಮಾವೇಶ ಬಲಿಯಾಗಿದೆ.
ನಾಳೆ ಮಂಡ್ಯದಲ್ಲಿ ಅಭಿನಂದನಾ ಸಮಾವೇಶಕ್ಕೆ ಜೆಡಿಎಸ್ ಪಕ್ಷ ಕರೆನೀಡಿತ್ತು. ಆದರೆ ದಿಢೀರ್ ಅಂತ ಸಮಾವೇಶವನ್ನ ಜೆಡಿಎಸ್ ನಾಯಕರು ಮುಂದೂಡಿದ್ದಾರೆ. ಹಾಸನದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್ ಸಮಾವೇಶ ನಡೆದಿತ್ತು. ಈ ಸಮಾವೇಶದಲ್ಲಿ ದೇವೇಗೌಡರ ಕುಟುಂಬದ ವಿರುದ್ಧ ಕೈ ನಾಯಕರು ಗುಡುಗಿದ್ದರು.
ಈ ಕಾಂಗ್ರೆಸ್ ಸಮಾವೇಶಕ್ಕೆ ಕೌಂಟರ್ ಕೊಡಲು ಜೆಡಿಎಸ್ ಪಡೆ ಮುಂದಾಗಿತ್ತು. ಕಾಂಗ್ರೆಸ್ ಪಡೆಯ ವಿರುದ್ಧ ತೊಡೆ ತಟ್ಟಲು ಜೆಡಿಎಸ್ ನಾಯಕರು ಸಜ್ಜಾಗಿದ್ದರು. ಆದರೆ ಜೆಡಿಎಸ್ ಬಣ ರಾಜಕೀಯದಿಂದ ಅಭಿನಂದನಾ ಸಮಾವೇಶವೇ ಕ್ಯಾನ್ಸಲ್ ಆಗಿದೆ. ಹೆಚ್ಡಿಕೆ ಜನ್ಮದಿನದಂದು ಸಾಂಸ್ಕೃತಿಕ ಕಾರ್ಯಕ್ರಮ, ಸಮಾವೇಶಕ್ಕೆ ಕರೆ ನೀಡಲಾಗಿತ್ತು.
ಮಂಡ್ಯದಲ್ಲಿ ಸಮಾವೇಶ ಮಾಡಲು ನಿರ್ದಾರ ಮಾಡಿದ್ದರು ದಳ ಪಡೆ. ಈ ಸಮಾವೇಶಕ್ಕೆ ಕರೆ ಕೊಟ್ಟಿದ್ದರು ಮಾಜಿ ಶಾಸಕ ಸಿ.ಎಸ್. ಪುಟ್ಟರಾಜು ಅವರು. ಆದರೆ ಪುಟ್ಟರಾಜು ಏಕಮುಖಿ ನಿರ್ಧಾರಕ್ಕೆ ಕೆಲವು ಶಾಸಕರು ಅಸಮಾಧಾನ ತೋರಿದ್ದರು. ಇತ್ತ ಬೆಳಗಾವಿ ಅಧಿವೇಶನದಲ್ಲೂ ಜೆಡಿಎಸ್ ಬಣ ಬಡಿದಾಟ ನಡೆಯುತ್ತಿದೆ. ಜೆಡಿಎಸ್ನ ಸುರೇಶ್ ಬಾಬು ವಿರುದ್ಧವೂ ಅಸಮಾಧಾನ ಬುಗಿಲೆದ್ದಿದೆ.