ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ 3 ಕ್ಷೇತ್ರಗಳ ಉಪಚುನಾವಣೆ ಮುಗಿದಿದೆ. 3 ಕ್ಷೇತ್ರಗಳಲ್ಲೂ ಕಾಂಗ್ರೆಸ್ ದಿಗ್ವಿಜಯ ಸಾಧಿಸಿದೆ. ಈ 3 ಕ್ಷೇತ್ರಗಳ ಪೈಕಿ ರಾಜ್ಯದ ಚಿತ್ತ ಚನ್ನಪಟ್ಟಣದತ್ತ ಎನ್ನುವಂತಿತ್ತು. ಏಕೆಂದರೆ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಿಎಂ, ಹಾಲಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ರು. ಅವರ ವಿರುದ್ದ ಬಿಜೆಪಿ ಇಂದ ಕಾಂಗ್ರೆಸ್ ಸೇರಿದ್ದ ಸಿಪಿ ಯೋಗೇಶ್ವರ್ ಕೈ ಟಿಕೆಟ್ ಪಡೆದು ದಿಗ್ವಿಜಯ ಸಾಧಿಸಿದ್ದರು.
ಈ ಫಲಿತಾಂಶ ಹೊರಬೀಳುತ್ತಲೇ ಜೆಡಿಎಸ್ ಪಾಳಯದಲ್ಲಿ ನಿರುತ್ಸಾಹ ಕಂಡುಬಂದಿತ್ತು. 3ನೇ ಭಾರಿ ನಿಖಿಲ್ ಸೋಲು ಜೆಡಿಎಸ್ ಗೆ ನುಂಗಲಾರದ ತುತ್ತಾಗಿತ್ತು. ಆದರೇ ನಿಖಿಲ್ ಕುಮಾರಸ್ವಾಮಿ ಮಾತ್ರ ಈ ಸೋಲು ನನಗೇನು ಹೊಸದಲ್ಲ ಎನ್ನುವ ಮಾತುಗಳನ್ನಾಡಿದ್ದರು. ಇದೀಗ ಸತತ ಸೋಲಿನಿಂದ ಕಂಗೆಟ್ಟಿದ್ದಾರೆ ನಿಖಿಲ್ ಕುಮಾರಸ್ವಾಮಿ. ಹೌದು.. ಸೋಲಿನ ಸುಳಿಯಿಂದ ಹೊರಬರಲು ಮಹಾದೇವನ ಮೊರೆ ಹೋಗಿದ್ದಾರೆ.
ಕುಟುಂಬ ಸಮೇತ ಆದಿಶಂಕರನ ದರ್ಶನ ಪಡೆದಿದ್ದಾರೆ ನಿಖಿಲ್ ಕುಮಾರಸ್ವಾಮಿ ಅವರು. ಮಹಾರಾಷ್ಟ್ರದ ನಾಸಿಕ್ ನಲ್ಲಿರೋ ತ್ರಯಂಬಕೇಶ್ವರ ದೇವಸ್ಥಾನಕ್ಕೆ ತೆರಳಿ ತ್ರಯಂಬಕೇಶ್ವರನಿಗೆ ನಿಖಿಲ್ ದಂಪತಿಯಿಂದ ವಿಶೇಷ ಪೂಜೆ ಮಾಡಿಸಿದ್ದಾರೆ. ಭಾರತದ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ ತ್ರಯಂಬಕೇಶ್ವರ ಸನ್ನಿದಿ. ಭವ್ಯವಾದ ಬ್ರಹ್ಮಗಿರಿ ಬೆಟ್ಟಗಳ ತಳದಲ್ಲಿ ನೆಲೆಸಿದೆ ಈ ದೇವಾಲಯ.
ಬ್ರಹ್ಮಗಿರಿ, ನೀಲಗಿರಿ, ಕಲಗಿರಿ..3 ಬೆಟ್ಟಗಳ ಮಧ್ಯೆ ಇರೋ ದೇವಾಲಯಕ್ಕೆ ಇತ್ತೀಚಿಗಷ್ಟೇ ಚನ್ನಪಟ್ಟಣದಲ್ಲಿ ಸೋಲು ಕಂಡಿದ್ದ ನಿಖಿಲ್ ಕುಮಾರಸ್ವಾಮಿ ಭೇಟಿ ಕೊಟ್ಟಿದ್ದಾರೆ. ಸ್ಪರ್ಧಿಸಿದ್ದ ಮೂರು ಚುನಾವಣೆಗಳಲೂ ನಿಖಿಲ್ ಗೆ ತೀವ್ರವಾಗಿ ಮುಖಭಂಗವಾಗಿತ್ತು. ಹೀಗಾಗಿ ರಾಜಕೀಯವಾಗಿ ನಿರಂತರ ಹಿನ್ನಡೆ ಹಿನ್ನೆಲೆಯಲ್ಲಿ ತ್ರಯಂಬಕೇಶ್ವರನ ಮೊರೆ ಹೋಗಿದ್ದಾರೆ.